ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತವಾಗಿ ತಾಯಿ ಮಡಿಲು ಸೇರಿದೆ

Last Updated 4 ಮಾರ್ಚ್ 2022, 16:25 IST
ಅಕ್ಷರ ಗಾತ್ರ

ಶಿರಸಿ: ‘ಯಾವ ಕ್ಷಣದಲ್ಲಾದರೂ ಅಪಾಯ ಸಂಭವಿಸಬಹುದು ಎಂಬ ಆತಂಕದಲ್ಲಿ ಹಲವು ದಿನಗಳನ್ನು ಕಳೆದಿದ್ದ ನನಗೆ ದೆಹಲಿಗೆ ಕಾಲಿಡುತ್ತಿದ್ದಂತೆ ಸುರಕ್ಷಿತವಾಗಿ ತಾಯಿ ಮಡಿಸಲು ಸೇರಿದ ಅನುಭವವಾಗಿದೆ’.

ಇದು ಉಕ್ರೇನ್‍ನ ವಿನಿಶಿಯಾ ನಗರದಿಂದ ಪಾರಾಗಿ ಶುಕ್ರವಾರ ದೆಹಲಿಗೆ ತಲುಪಿದ ಬನವಾಸಿಯ ಇಮ್ರಾನ್ ನಜಿರ್ ಚೌದರಿ ಮಾತು. ಎಂ.ಬಿ.ಬಿ.ಎಸ್. ಮೂರನೆ ವರ್ಷದ ವಿದ್ಯಾರ್ಥಿಯಾಗಿದ್ದ ಇಮ್ರಾನ್ ಎರಡು ದಿನಗಳ ಹಿಂದೆ ರೊಮೇನಿಯಾ ರಾಜಧಾನಿ ಬುಚಾರೆಸ್ಟ್ ತಲುಪಿದ್ದರು. ಅಲ್ಲಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ತಲುಪಿದ್ದಾರೆ.

‘ಶನಿವಾರ ಸ್ವಗ್ರಾಮ ಬನವಾಸಿಗೆ ಆಗಮಿಸುತ್ತೇನೆ. ಕುಟುಂಬದವರನ್ನು ಭೇಟಿಯಾಗುವ ಕಾತುರದಲ್ಲಿದ್ದೇನೆ. ನನ್ನಂತೆ ಯುದ್ಧಭೂಮಿಯಲ್ಲಿ ಸಿಲುಕಿರುವ ಸಹೋದರರನ್ನು ಕರೆತನ್ನಿ ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT