ಸೋಮವಾರ, ಸೆಪ್ಟೆಂಬರ್ 26, 2022
22 °C
ಸಹ ಸಿಬ್ಬಂದಿಯ ಪಾಸ್‌ವರ್ಡ್ ದುರ್ಬಳಕೆ ಮಾಡಿರುವ ಆರೋಪ

ಯಲ್ಲಾಪುರ: ₹2.69 ಕೋಟಿ ವಂಚನೆ, ಬ್ಯಾಂಕ್ ಅಧಿಕಾರಿ ನಾಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲ್ಲಾಪುರ: ‘ಪಟ್ಟಣದ ಬ್ಯಾಂಕ್ ಆಫ್ ಬರೋಡಾದ ಸಿಬ್ಬಂದಿಯೊಬ್ಬರು, ಸಹ ಸಿಬ್ಬಂದಿಯ ಪಾಸ್‌ವರ್ಡ್ ದುರ್ಬಳಕೆ ಮಾಡಿಕೊಂಡು ಬ್ಯಾಂಕ್ ಖಾತೆಯಿಂದ ₹ 2.69 ಕೋಟಿಗೂ ಅಧಿಕ ಹಣವನ್ನು ತನ್ನ ಹೆಂಡತಿಯ ಖಾತೆಗೆ ವರ್ಗಾಯಿಸಿ ಬಳಿಕ ನಾಪತ್ತೆಯಾಗಿದ್ದಾರೆ’ ಎಂದು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಕುಮಾರ್ ಬೋನಾಲ್ (33) ಆರೋಪಿಯಾಗಿದ್ದಾರೆ. ಅವರು ಆಂಧ್ರಪ್ರದೇಶದ ಅನಂತಪುರದ ಸಿಂಡಿಕೇಟ್ ನಗರದವರಾಗಿದ್ದು  ಪ್ರಸ್ತುತ ಯಲ್ಲಾಪುರದ ಕೋರ್ಟ್ ರಸ್ತೆಯ ಬಳಿ ವಾಸವಾಗಿದ್ದರು.

‘ಆರೋಪಿಯು ತನ್ನ ಹೆಂಡತಿ ರೇವತಿ ಪ್ರಿಯಾಂಕಾ ಗೊರ‍್ರೆ ಹಾಗೂ ಇತರರ ಜೊತೆ ಸೇರಿ ಬ್ಯಾಂಕ್‌ಗೆ ಮೋಸ ಮಾಡಿದ್ದಾರೆ. ಯಲ್ಲಾಪುರದ  ಬ್ಯಾಂಕ್ ಆಫ್ ಬರೋಡಾದ ಎಸ್‌ಬಿಐ ಖಾತೆಯಿಂದ ಆಂಧ್ರಪ್ರದೇಶದ ಪ್ರಕಾಶಮ್‌ ಜಿಲ್ಲೆಯ ಚಿರಾಲದ ಎಸ್‌ಬಿಐ ಶಾಖೆಯಲ್ಲಿರುವ ತನ್ನ ಪತ್ನಿಯ ಖಾತೆಗೆ ಆರೋಪಿ ಹಣ ವರ್ಗಾವಣೆ ಮಾಡಿದ್ದಾರೆ. ಏ.4ರಿಂದ, ಸೆ.5ನೇ ತಾರೀಕಿನ ಅವಧಿಯಲ್ಲಿ ಒಟ್ಟು ₹2.69 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಬ್ಯಾಂಕ್ ಆಫ್ ಬರೋಡಾ ಶಾಖೆಯ ವ್ಯವಸ್ಥಾಪಕ ವಿಘ್ನೇಶ್ವರ ಭಟ್ಟ, ‘ಪ್ರಕರಣದ ಕುರಿತು ಮೇಲಾಧಿಕಾರಿಗಳಿಗೆ ವರದಿ ನೀಡಲಾಗಿದೆ. ಆರೋಪಿಯು ನಾಪತ್ತೆಯಾಗಿರುವ ಕುರಿತು ಅವರ ಸೂಚನೆಯಂತೆ ದೂರು ದಾಖಲಿಸಲಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.