ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18ರಿಂದ ಭಗವದ್ಗೀತಾ ಅಭಿಯಾನ

Last Updated 15 ಡಿಸೆಂಬರ್ 2020, 20:30 IST
ಅಕ್ಷರ ಗಾತ್ರ

ಶಿರಸಿ: ‘ಡಿ.18ರಿಂದ 24ರವರೆಗೆ ರಾಜ್ಯದಾದ್ಯಂತ ಭಗವದ್ಗೀತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಡಿ.25ರಂದು ಗೀತಾ ಜಯಂತಿ ನಡೆಯಲಿದೆ. ಕೊರೊನಾ ಕಾರಣದಿಂದ ಈ ಬಾರಿ ಆನ್‌ಲೈನ್ ಮೂಲಕವೇ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ’ ಎಂದರು.

‘ಅಭಿಯಾನದಲ್ಲಿ ಬೆಂಗಳೂರು ನಗರ ಭಾಗದವರು ಮುಂಚೂಣಿಯಲ್ಲಿದ್ದಾರೆ. ಡಿ.25ರಂದು ಏಕಕಾಲಕ್ಕೆ ಒಂದು ಸಾವಿರಕ್ಕೂ ಹೆಚ್ಚು ಜನರು ಮೂರನೆಯ ಅಧ್ಯಾಯ ಪಠಣ ಮಾಡಲಿದ್ದಾರೆ.ಅಪರಾಧ ತಡೆಯಲು ಈ ಅಧ್ಯಾಯ ತಿಳಿವಳಿಕೆ ನೀಡುತ್ತದೆ.ಭಾಷಣ, ಗೀತಾ ಕಂಠಪಾಠ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಪ್ರತಿದಿನ ಪ್ರವಚನ ನಡೆಯಲಿದೆ’ ಎಂದರು.

ಹೆಚ್ಚಿನ ಮಾಹಿತಿಗೆ ಗಂಗಾಧರ ಬೋಡೆ (ಮೊಬೈಲ್ –98453 71191), ನಾರಾಯಣ ಭಟ್ಟ ಸೂಳಗಾರ (ಮೊಬೈಲ್:94495 68081) ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT