ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳದ ಪ್ರಥಮ ಸರ್ಕಾರಿ ಪ್ರೌಢಶಾಲೆಗೆ ‘ಉತ್ತಮ ಶಾಲೆ’ ಪ್ರಶಸ್ತಿ

Last Updated 13 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಭಟ್ಕಳ: ಸುಮಾರು 30 ವರ್ಷಗಳ ಹಿಂದೆ ಪ್ರೌಢಶಿಕ್ಷಣಕ್ಕಾಗಿ ಸುಮಾರು ಎಂಟು ಕಿಲೋಮೀಟರ್ದೂರ ಸಾಗಬೇಕಿತ್ತು. ಈ ಕೊರತೆಯನ್ನು ನೀಗಿಸಲು ತಾಲ್ಲೂಕಿನಲ್ಲೇ ಮೊದಲು, 1989ರಲ್ಲಿ ಪ್ರೌಢಶಾಲೆ ಆರಂಭವಾಯಿತು.

ಈ ಹಿರಿಮೆ ತಾಲ್ಲೂಕಿನತೆಂಗಿನಗುಂಡಿ ಪ್ರೌಢಶಾಲೆಯದ್ದಾಗಿದೆ. ಗ್ರಾಮಸ್ಥರ ಒತ್ತಾಯದ ಮೇರೆಗೆ ಶುರುವಾದ ಈ ವಿದ್ಯಾಕೇಂದ್ರವು, ಕಡಲತೀರದ ಸನಿಹದಲ್ಲೇ ಇದೆ.

ಆ ಕಾಲದಲ್ಲಿ ಸರ್ಕಾರಿ ಪ್ರೌಢಶಾಲೆ ಇದೊಂದೇ ಆಗಿದ್ದ ಕಾರಣ, ಅಂದು ಆರಂಭದಲ್ಲೇ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದರು. ಅಂದಿನ ಮಟ್ಟಿಗೆ ಇದೊಂದುದಾಖಲೆಯೂ ಆಗಿತ್ತು. ಕ್ರಮೇಣ ಎಲ್ಲಾ ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ಪ್ರೌಢಶಾಲೆಗಳು ಆರಂಭವಾದವು. ಈ ಬಾರಿ ಶಾಲೆಯಲ್ಲಿ 104 ವಿದ್ಯಾರ್ಥಿಗಳು ಪ್ರೌಢ ಮತ್ತು ಸುಮಾರು 25 ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾರೆ.

ಶಾಲೆಗೆ ನಾಗಪ್ಪ ನಾಯ್ಕ ಎಂಬುವರು ಸುಮಾರು 19 ಗುಂಟೆ ಜಾಗವನ್ನು ದಾನವಾಗಿ ಕೊಟ್ಟಿದ್ದಾರೆ. ಶಾಲೆಯಲ್ಲಿ ಸುಸಜ್ಜಿತ ಗ್ರಂಥಾಲಯ, ಕೊಠಡಿಗಳು. ಕುಡಿಯುವ ನೀರಿನ ಬಾವಿ, ಪ್ರತ್ಯೇಕವಾಗಿ ವಿಜ್ಞಾನ ಹಾಗೂ ಗಣಿತ ಪ್ರಯೋಗಾಲಯ, ಕಂಪ್ಯೂಟರ್ ಶಿಕ್ಷಣ, ವಿಶಾಲವಾದ ಆಟದ ಮೈದಾನ, ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕಿ ಸೇರಿದಂತೆ ಒಟ್ಟುಎಂಟುಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

‘ಉತ್ತಮ ಶಾಲೆ’ ಪ್ರಶಸ್ತಿ:2009ರಲ್ಲಿ ರಾಜ್ಯಮಟ್ಟದಲ್ಲಿ ‘ಉತ್ತಮ ಸರ್ಕಾರಿ ಪ್ರೌಢಶಾಲೆ’ ಪ್ರಶಸ್ತಿಗೆ ಈ ಶಾಲೆ ಭಾಜನವಾಯಿತು. ‘ಉತ್ತಮ ಶಿಕ್ಷಕ’, ‘ಜನಮೆಚ್ಚಿದ ಶಿಕ್ಷಕ’ ಪ್ರಶಸ್ತಿಪುರಸ್ಕೃತ ಶಿಕ್ಷಕರುಈ ಶಾಲೆಯಲ್ಲಿದ್ದಾರೆ. ಇದುಹೆಮ್ಮೆಯ ವಿಷಯವಾಗಿದೆ ಎಂದು ಮುಖ್ಯಶಿಕ್ಷಕಿ ಉಷಾ ಭಟ್ ಹೇಳಿದರು.

ಎಸ್ಸೆಸ್ಸೆಲ್ಸಿಪರೀಕ್ಷೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾವಾರು ಫಲಿತಾಂಶದಲ್ಲಿ ಹೆಚ್ಚಳವಾಗುತ್ತಿದ್ದು, ಕಳೆದ ವರ್ಷ ಶೇ 98.1ರಷ್ಟು ಫಲಿತಾಂಶ ಪಡೆದುಕೊಂಡಿದೆ.

ಈ ಶಾಲೆಯ ವಿದ್ಯಾರ್ಥಿಗಳು ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದುಕೊಂಡಿದ್ದಾರೆ. ಅಲ್ಲದೇ ಸತತ ಎರಡು ಬಾರಿ ‘ಇನ್‌ಸ್ಪೈರ್ ಅವಾರ್ಡ್’ ಕೂಡ ತಮ್ಮದಾಗಿಸಿಕೊಂಡಿದ್ದಾರೆ.‘ವಿಜ್ಞಾನ ನಾಟಕ’ ಸ್ಪರ್ಧೆಯಲ್ಲಿ ವಿಭಾಗೀಯ ಮಟ್ಟದವರೆಗೂಸ್ಪರ್ಧಿಸಿದ್ದಾರೆ.

ಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳಲ್ಲದೇ ವಾರ್ಷಿಕ ಕ್ರೀಡಾಕೂಟ, ಪ್ರತಿಭಾ ಕಾರಂಜಿ, ಪರಿಸರ ದಿನಾಚರಣೆ, ಉಪನ್ಯಾಸ ಸೇರಿದಂತೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಶಾಲೆಯ ಹಿರಿಯ ಶಿಕ್ಷಕ ಭಾಸ್ಕರ ವಿ.ನಾಯ್ಕ ಹೇಳುತ್ತಾರೆ.

ಬೇಸಿಗೆಯಲ್ಲಿ ನೀರಿನ ಕೊರತೆ:ಬೇಸಿಗೆಯಲ್ಲಿ ಶಾಲೆಗೆ ನೀರಿನ ಕೊರತೆ ಉಂಟಾಗುತ್ತದೆ. ಇರುವ ಒಂದು ಕೊಳವೆಬಾವಿ ಹಾಳಾಗಿದೆ. ಶಾಲೆಯ ಆಟದ ಮೈದಾನ ವಿಶಾಲವಾಗಿದ್ದರೂ ಕಾಂಪೌಂಡ್ ಇಲ್ಲ. ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ಕಂಪ್ಯೂಟರ್ ಇಲ್ಲವಾಗಿದೆ. ದಾನಿಗಳು ನೀಡಿರುವ ಕಂಪ್ಯೂಟರನ್ನೇ ಕಚೇರಿ ಕೆಲಸಕ್ಕೆ ಮತ್ತು ಮಕ್ಕಳ ಶಿಕ್ಷಣಕ್ಕೆ ಬಳಸಲಾಗುತ್ತಿದೆ. ಪ್ರಯೋಗಾಲಯದ ನಿರ್ವಹಣೆಗೆ ಯಾವುದೇ ಅನುದಾನ ದೊರಕುತ್ತಿಲ್ಲ. ಹಿಂದಿ ಶಿಕ್ಷಕರ ಕೊರತೆಯೂ ಇದೆ ಎಂದು ಉಷಾ ಭಟ್ ಬೇಸರಿಸಿದರು.

ಶಾಲೆಯ ಅಭಿವೃದ್ಧಿಯಲ್ಲಿ ಈ ಹಿಂದೆ ಇಲ್ಲಿ ಮುಖ್ಯಶಿಕ್ಷಕರಾಗಿ ಕರ್ತವ್ಯನಿರ್ವಹಿಸಿದವರ ಶ್ರಮ ಬಹಳಷ್ಟಿದೆ. ಅಲ್ಲದೇ ದಾನಿಗಳು ಮತ್ತು ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು ಕೊಡುಗೆಯೂ ಸಾಕಷ್ಟಿದೆ. ಇವರಿಂದಲೇ ಇಂದು ಶಾಲೆಯ ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT