ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ವಾಹನಗಳ ಒಡೆಯ ಭೀಮಣ್ಣ

Last Updated 1 ಡಿಸೆಂಬರ್ 2019, 12:46 IST
ಅಕ್ಷರ ಗಾತ್ರ

ಯಲ್ಲಾಪುರ: ಕೃಷಿಕ ಹಾಗೂ ಉದ್ಯಮಿಯಾಗಿರುವ ಭೀಮಣ್ಣ ನಾಯ್ಕ ಅವರು ಏಳು ವಾಹನಗಳ ಒಡೆಯ. ಅವರ ಹೆಸರಿನಲ್ಲಿ ಟೊಯೊಟಾ ಇನ್ನೊವಾ, ಟೊಯೊಟಾ ಫಾರ್ಚುನರ್, ಪತ್ನಿ ಗೀತಾ ಹೆಸರಿನಲ್ಲಿ ಮಹೇಂದ್ರ ಪಿಕಪ್, ಮಗ ಅಶ್ವಿನ್ ಹೆಸರಿನಲ್ಲಿ ಫೋರ್ಡ್ ಎಂಡಿವರ್, ವೋಕ್ಸ್ ವ್ಯಾಗನ್ ಪೊಲೊ, ಮಹೇಂದ್ರ ಪಿಕಪ್ ಬೊಲೆರೊ ವಾಹನಗಳಿವೆ.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗುರುವಾರ ಸಲ್ಲಿಸಿದ ನಾಮಪತ್ರದ ಜೊತೆ ಇರುವ ಆಸ್ತಿ ವಿವರದಲ್ಲಿ ಭೀಮಣ್ಣ ಈ ಮಾಹಿತಿ ನೀಡಿದ್ದಾರೆ. ಭೀಮಣ್ಣಗಿಂತ ಅವರ ಪತ್ನಿ ದೊಡ್ಡ ಸಾಲಗಾರ. ಅವರು ವಿವಿಧ ಬ್ಯಾಂಕ್‌, ಹಣಕಾಸು ಸಂಸ್ಥೆಗಳಲ್ಲಿ ₹ 20.32 ಕೋಟಿ ಸಾಲ ಪಡೆದಿದ್ದಾರೆ. ಭೀಮಣ್ಣ ₹ 14.92 ಕೋಟಿ, ಅಶ್ವಿನ್ ₹ 98.91 ಲಕ್ಷ ಸಾಲ ಹೊಂದಿದ್ದಾರೆ. ಮೂವರಿಂದ ಒಟ್ಟು ₹ 9.56 ಕೋಟಿ ಮೌಲ್ಯದ ಚರಾಸ್ತಿ, ₹ 23.31 ಕೋಟಿ ಸ್ಥಿರಾಸ್ತಿ ಇದೆ. ಗೀತಾ ಅವರ ಬಳಿ ₹ 19.11 ಲಕ್ಷ, ಭೀಮಣ್ಣ ಅವರ ಬಳಿ ₹ 7.56 ಲಕ್ಷ ಬಂಗಾರದ ಆಭರಣವಿದೆ.

ಬ್ಯಾಂಕ್ ಖಾತೆಯಲ್ಲಿ ₹ 10.68 ಲಕ್ಷ, ಪತ್ನಿ ಹೆಸರಿನಲ್ಲಿ ₹ 4.22 ಲಕ್ಷ, ಪುತ್ರನ ಹೆಸರಿನಲ್ಲಿ ₹ 5.34 ಲಕ್ಷ, ಷೇರು ಹೂಡಿಕೆ ಭೀಮಣ್ಣ ಹೆಸರಿನಲ್ಲಿ ₹ 18.19 ಲಕ್ಷ, ಪತ್ನಿ ಹೆಸರಿನಲ್ಲಿ ₹ 4.70 ಲಕ್ಷ, ಅಶ್ವಿನ್ ಹೆಸರಿನಲ್ಲಿ ₹ 72,947 ಇದೆ. ಭೀಮಣ್ಣ ಅವರ ವಿದ್ಯಾರ್ಹತೆ ಏಳನೇ ತರಗತಿ. ಬೆಂಗಳೂರು ನೆಲಮಂಗಲ ಠಾಣೆಯಲ್ಲಿ ಒಂದು ಪ್ರಕರಣ ವಿಚಾರಣೆ ಹಂತದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT