ಬಿಜೆಪಿಯಿಂದ ‘ಅಭಯಂಕರ ದಿಗ್ವಿಜಯ’ ಹೋಮ

ಮಂಗಳವಾರ, ಜೂನ್ 18, 2019
26 °C

ಬಿಜೆಪಿಯಿಂದ ‘ಅಭಯಂಕರ ದಿಗ್ವಿಜಯ’ ಹೋಮ

Published:
Updated:
Prajavani

ಶಿರಸಿ: ಭಾರತ ವಿಶ್ವಗುರುವಾಗಬೇಕು, ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಅನಂತಕುಮಾರ ಹೆಗಡೆ ಮತ್ತೆ ಗೆಲುವಿನ ನಗೆ ಬೀರಬೇಕು ಎಂಬ ಪ್ರಾರ್ಥಿಸಿ, ಬಿಜೆಪಿ ಸದಸ್ಯರು ಮಂಗಳವಾರ ಇಲ್ಲಿ ‘ಅಭಯಂಕರ ದಿಗ್ವಿಜಯ’ ಹೋಮ ನಡೆಸಿದರು.

ಯುವ ಮೋರ್ಚಾ ಹಾಗೂ ನಗರ ಮಂಡಳದ ಆಶ್ರಯದಲ್ಲಿ ನಡೆದ ಹೋಮದ ಪೂರ್ಣಾಹುತಿಯ ವೇಳೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಭಾಗವಹಿಸಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಈಗಾಗಲೇ ಬಹುತೇಕ ಸಮೀಕ್ಷೆಗಳು ಬಿಜೆಪಿ ಅಧಿಕಾರ ಹಿಡಿಯುವುದು ಶತಸಿದ್ಧ ಎಂದಿವೆ. ಇಷ್ಟಾದರೂ ಇಲಿಯಂತಹ ಮಹಾಘಟಬಂಧನ್ ಅನ್ನು ಹುಲಿಯಂತೆ ಬಿಂಬಿಸುತ್ತಿರುವ ಮಾಧ್ಯಮಗಳು ಇನ್ನಾದರೂ ವಸ್ತುನಿಷ್ಠ ವರದಿ ಮಾಡಿ ಗೌರವ ಉಳಿಸಿಕೊಳ್ಳಬೇಕು’ ಎಂದರು.

ವಿ.ವಿ ಪ್ಯಾಟ್ ಎಣಿಕೆ ಕುರಿತಂತೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶ ಸ್ವಾಗತಾರ್ಹ. ಅದರಿಂದ ಸೋಲು-ಗೆಲುವಿನ ಮೇಲೆ ಪರಿಣಾಮವಾಗುವುದಿಲ್ಲ. ಮತ ಎಣಿಕೆ ಪಾರದರ್ಶಕವಾಗಿ ನಡೆಯುತ್ತದೆ ಎಂದು ಹೇಳಿದರು. ಯುವ ಮೋರ್ಚಾ ಘಟಕದ ಅಧ್ಯಕ್ಷ ವಿಶಾಲ ಮರಾಠೆ, ಪ್ರಮುಖರಾದ ನಂದನ ಸಾಗರ, ರಾಜೇಶ ಶೆಟ್ಟಿ, ಸುದರ್ಶನ ವೈದ್ಯ, ವೀಣಾ ಭಟ್ಟ, ರವಿ ಚಂದಾವರ, ರಿತೇಶ ಕೆ, ಕೃಷ್ಣ ಎಸಳೆ  ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !