ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಅಭಿಪ್ರಾಯ ಆಲಿಸಲು ಅರುಣ್ ಸಿಂಗ್ ರಾಜ್ಯಕ್ಕೆ ಬರುತ್ತಿದ್ದಾರೆ: ಈಶ್ವರಪ್ಪ

Last Updated 15 ಜೂನ್ 2021, 8:10 IST
ಅಕ್ಷರ ಗಾತ್ರ

ಶಿರಸಿ:ಬಿಜೆಪಿ ಪ್ರಜಾಪ್ರಭುತ್ವಕ್ಕೆ ಮನ್ನಣೆ ನೀಡುವ ಪಕ್ಷ. ಸರ್ಕಾರದ ನಾಯಕತ್ವದ ಮೇಲಿನ ಆರೋಪಗಳನ್ನು ಹೈಕಮಾಂಡ್ ಹಾಗೆಲ್ಲ ಒಪ್ಪದು. ಹೀಗಾಗಿ ಉಸ್ತುವಾರಿ ಅರುಣ್ ಸಿಂಗ್ ಅಭಿಪ್ರಾಯ ಆಲಿಸಲು ಬರುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಅವರು, 'ಅರುಣ ಸಿಂಗ್ ನಾಲ್ಕು ಗೋಡೆಯ ನಡುವೆ ಸಚಿವರು, ಶಾಸಕರು, ಪಕ್ಷದ ಕೋರ್ ಕಮಿಟಿ ಪ್ರಮುಖರ ಅಭಿಪ್ರಾಯ ಆಲಿಸಲಿದ್ದಾರೆ' ಎಂದರು.

'ಗೊಂದಲಕ್ಕೆ ನಾಯಕತ್ವ ಕಾರಣವಲ್ಲ. ಪಕ್ಷದ ನಾಯಕರೂ ಕಾರಣರಲ್ಲ.‌ ಸರ್ಕಾರಕ್ಕೆ ಮೊದಲೇ ಬಹುಮತ ಬಂದಿದ್ದರೆ ಇಂತಹ ಸಮಸ್ಯೆ ಎದುರಾಗುತ್ತಿರಲಿಲ್ಲ' ಎಂದರು.

'ದಿಗ್ವಿಜಯ ಸಿಂಗ್ ಹೇಳಿಕೆಯನ್ನು ಕಾಂಗ್ರೆಸ್ ನ ಯಾವ ನಾಯಕರೂ ಖಂಡಿಸುತ್ತಿಲ್ಲ. ದೇಶ ವಿರೋಧಿ ಹೇಳಿಕೆಗಳನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಎಂಬುದು ಸಾಬೀತಾಗುತ್ತಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT