ದೋಣಿ ದುರಂತ: 6 ಜನರ ಶವ ಪತ್ತೆ

7
ಒಟ್ಟು 14 ಜನರ ಮೃತದೇಹ ಹೊರಕ್ಕೆ; ಇನ್ನೂ ಇಬ್ಬರಿಗೆ ಮುಂದುವರಿದ ಹುಡುಕಾಟ

ದೋಣಿ ದುರಂತ: 6 ಜನರ ಶವ ಪತ್ತೆ

Published:
Updated:
Prajavani

ಕಾರವಾರ: ಇಲ್ಲಿನ ಕೂರ್ಮಗಡ ಸಮೀಪ ಅರಬ್ಬಿ ಸಮುದ್ರದಲ್ಲಿ ಸೋಮವಾರ ದೋಣಿ ಬುಡಮೇಲಾಗಿ ಮೃತಪಟ್ಟವರ ಪೈಕಿ, ಮಂಗಳವಾರ ಮತ್ತೆ ಆರು ಜನರ ಶವಗಳನ್ನು ಹೊರತೆಗೆಯಲಾಗಿದೆ. ಇದರೊಂದಿಗೆ ಒಟ್ಟು 14 ಮಂದಿ ಮೃತಪಟ್ಟಂತಾಗಿದೆ.

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಹೊಸೂರಿನ ಕಿರಣ ಸೋಮಪ್ಪ ಬೆಳವಲಗೊಪ್ಪ (6), ಪರಶುರಾಮ (35), ಸಂಜೀವಿನಿ (15), ಸೌಜನ್ಯಾ (12), ಕಾರವಾರದ ಸುಂಕೇರಿಯ ಶ್ರೇಯಸ್ ಪಾವಸ್ಕರ್ (28), ಗೀತಾ ಹುಲಸ್ವಾರ್ (23) ಅವರ ಶವಗಳನ್ನು ನೀರಿನಿಂದ ಮೇಲೆತ್ತಲಾಗಿದೆ. ಇನ್ನೂ ಇಬ್ಬರು ಮಕ್ಕಳಿಗೆ ಹುಡುಕಾಟ ಮುಂದುವರಿದಿದೆ.

ಮೃತರಲ್ಲಿ ಏಳು ಮಂದಿ ಒಂದೇ ಕುಟುಂಬದವರು. ಪ್ರಕರಣ ಸಂಬಂಧ ದೋಣಿ ಮಾಲೀಕ ದಯಾನಂದ ಜಾಧವ್ ಹಾಗೂ ಚಾಲಕ ರಂಗನಾಥ್ ಚೋಪ್ಡೆ ಅವರನ್ನು ಬಂಧಿಸಲಾಗಿದೆ. ದೋಣಿಯಲ್ಲಿ 35 ಜನರಿದ್ದರು ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ತಿಳಿಸಿದರು.

ದೋಣಿಗೆ ಅನುಮತಿ ಇರಲಿಲ್ಲ

ಕೂರ್ಮಗಡ ಜಾತ್ರೆಗೆ ತೆರಳುವ ಭಕ್ತರ ಅನುಕೂಲಕ್ಕೆ 16 ದೋಣಿಗಳ ಸಂಚಾರಕ್ಕೆ ಬಂದರು ಇಲಾಖೆ ಅನುಮತಿ ನೀಡಿತ್ತು. ಮರಳು ಸಾಗಣೆ ಮಾಡುವಂಥ ದೊಡ್ಡ ದೋಣಿಗಳನ್ನು ಮಾತ್ರ ಅದಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ, ದುರಂತಕ್ಕೀಡಾದ ದೋಣಿಗೆ ಅನುಮತಿ ನೀಡಿರಲಿಲ್ಲ ಎಂದು ಬಂದರು ಅಧಿಕಾರಿ ಸುರೇಶ್ ಶೆಟ್ಟಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !