ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣಕುಂಭದ ಬದಲು ಪುಸ್ತಕ ಮೆರವಣಿಗೆ: ಸಿ.ಕೆ.ರಾಮೇಗೌಡ

Last Updated 8 ಮಾರ್ಚ್ 2021, 7:07 IST
ಅಕ್ಷರ ಗಾತ್ರ

ಶಿರಸಿ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪೂರ್ಣಕುಂಭ ಸ್ವಾಗತ, ಮೆರವಣಿಗೆ ಬದಲು ಕನ್ನಡದ ಪುಸ್ತಕ ಹೊತ್ತು ಸಾಗುವ ಸಂಪ್ರದಾಯ ಪಾಲಿಸುವುದು ಸೂಕ್ತ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸಿ.ಕೆ.ರಾಮೇಗೌಡ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಧಾರ್ಮಿಕ ನೀತಿ ಅನಿಸರಿಸುವುದು ಒಪ್ಪುವಂತದ್ದಲ್ಲ. ಅದು ಮಹಿಳೆಯರನ್ನೂ ಶೋಷಿಸಿದಂತೆ. ಪೂರ್ಣಕುಂಭ ಮೆರವಣಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿರಲಿ' ಎಂದರು.

'ಕನ್ನಡ ಸಾಹಿತ್ಯ ಪರಿಷತ್‌ಗೆ ಪಕ್ಷ, ಜಾತಿಯ ಕಳಂಕ ಅಂಟಿದೆ. ಅದರಿಂದ ಹೊರತಂದು ಜಾತ್ಯತೀತ ಪರಿಷತ್ ಕಟ್ಟುವ ಗುರಿ ಹೊಂದಿದ್ದೇನೆ' ಎಂದರು.

'ನಾಲ್ಕು ದಶಕಗಳಿಂದ ಕನ್ನಡಪರ ಚಟುವಟಿಕೆ ಮಾಡುತ್ತಿದ್ದೇನೆ. ಯಾವ ರಾಜಕೀಯ ಪಕ್ಷಗಳ ಜತೆಯೂ ನಂಟು ಇಟ್ಟುಕೊಂಡಿಲ್ಲ.ಕನ್ನಡ ಕಟ್ಟುವ ಕೆಲಸ ಮಾತ್ರ ನನ್ನ ಗುರಿ' ಎಂದರು. ಶಾಂತವೇರಿ ಗೋಪಾಲಗೌಡ ನಮಗೆ ಆದರ್ಶ. ಹೀಗಾಗಿ, ನಮ್ಮ ಕನ್ನಡ ಜನಶಕ್ತಿ ಕೇಂದ್ರದ ಮೂಲಕ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿದ್ದೇವೆ' ಎಂದರು.

'ಕಸಾಪದ ರಾಜ್ಯ ಘಟಕದ ಗೌರವ ಕಾರ್ಯದರ್ಶಿಯಾಗಿ, ಬೆಂಗಳೂರು ನಗರ ಘಟಕದ ಅಧ್ಯಕ್ಷನಾಗಿ ಕೆಲಸ ನಿರ್ವಹಿಸಿದ ಅನುಭವ ಇದೆ' ಎಂದರು.

'3 ಲಕ್ಷಕ್ಕೂ ಹೆಚ್ಚು ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಮೇ.9 ರಂದು ನಡೆಯುವ ಚುನಾವಣೆಯಲ್ಲಿ ಸ್ಪರ್ಧೆ ನಿಶ್ಚಿತ' ಎಂದರು.

'ಗಡಿನಾಡಿನ ಕನ್ನಡ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಸರ್ಕಾರ ಈ ಕೆಲಸ ಮಾಡುವಂತೆ ನಿರಂತರ ಒತ್ತಡ ತರಲಾಗುವುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT