ದೋಣಿ ದುರಂತ: 7 ಮಂದಿಗೆ ಮುಂದುವರಿದ ಹುಡುಕಾಟದಲ್ಲಿ ಮಗುವಿನ ಶವ ಪತ್ತೆ

7

ದೋಣಿ ದುರಂತ: 7 ಮಂದಿಗೆ ಮುಂದುವರಿದ ಹುಡುಕಾಟದಲ್ಲಿ ಮಗುವಿನ ಶವ ಪತ್ತೆ

Published:
Updated:

ಕಾರವಾರ: ಕೂರ್ಮಗಡ ಸಮೀಪ ದೋಣಿ ದುರಂತದಲ್ಲಿ ನೀರುಪಾಲಾಗಿದ್ದ ಮಗುವೊಂದರ ಶವ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ. ಇದರೊಂದಿಗೆ ಪತ್ತೆಯಾದ ಶವಗಳ ಸಂಖ್ಯೆ 9ಕ್ಕೇರಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಬೆಳಿಗ್ಗೆ 9.30ಕ್ಕೆ ಮಗುವಿನ ಮೃತದೇಹ ಪತ್ತೆಯಾಗಿದೆ.

ಲೈಟ್ ಹೌಸ್ ಪ್ರದೇಶದಲ್ಲಿ  ನೌಕಾದಳದ ಹೆಲಿಕಾಪ್ಟರ್ ಪತ್ತೆ ಮಾಡಿದೆ. ಅಲ್ಲಿಗೆ ಎರಡು ದೋಣಿಗಳನ್ನು ಕಳುಹಿಸಲಾಗಿದೆ.

ಪೊಲೀಸ್ ಇಲಾಖೆ, ಟ್ಯಾಗೋರ್ ಬೀಚ್ ಸಮಿತಿ ಸಿಬ್ಬಂದಿ, ಲೈಫ್ ಗಾರ್ಡ್ಸ್ ನ ಐದು ತಂಡಗಳನ್ನು ರಚಿಸಲಾಗಿದೆ. ಇವು ಕಡಲತೀರದಲ್ಲಿ ಶೋಧ ನಡೆಸುತ್ತಿವೆ.

ಭಾರತೀಯ ಕೋಸ್ಟ್ ಗಾರ್ಡ್ ನ  c-155, c-420, c-123 ದೋಣಿಗಳು ಶೋಧ ಕಾರ್ಯದಲ್ಲಿ ತೊಡಗಿವೆ.

ಅಲ್ಲದೆ, ಕೋಸ್ಟ್ ಗಾರ್ಡ್ ನ ಅಮರ್ಥ್ಯ ದೊಡ್ಡ ಬೋಟ್, ನೌಕಾಸೇನೆಯ ತಿಲಂಚಾಂಗ್ ದೊಡ್ಡ ಬೋಟುಗಳು ರಾತ್ರಿಯಿಡೀ ಕಾರ್ಯ ನಿರ್ವಹಿಸಿವೆ. ಶೋಧ ಕಾರ್ಯ ಮುಂದುವರಿದಿದೆ.

ನಾಪತ್ತೆಯಾಗಿರುವ 7 ಮಂದಿ ಪೈಕಿ ಇನ್ನೂ 6 ಮಂದಿಯ ಶವ ಪತ್ತೆಯಾಗಬೇಕಿದೆ.

ಕರಾವಳಿ ಕಾವಲು ಪಡೆಯ ದೋಣಿ, ನೌಕಾದಳದ ಹೆಲಿಕಾಪ್ಟರ್ ನೆರವು ಪಡೆಯಲಾಗಿದೆ. ಕರಾವಳಿ ಕಾವಲು ಪೊಲೀಸ್, ಸ್ಥಳೀಯ ಪೊಲೀಸರೂ ಕಾರ್ಯಾಚರಣೆಯಲ್ಲಿದ್ದಾರೆ. ಕೂರ್ಮಗಡದಲ್ಲಿ ಸೋಮವಾರ ಮುಳುಗಿದ ದೋಣಿಯಲ್ಲಿ ಒಟ್ಟು 33 ಮಂದಿ ಪ್ರಯಾಣಿಸುತ್ತಿದ್ದರು. ದುರಂತದಲ್ಲಿ ಎಂಟು ಮಂದಿಯ ಶವ ಪತ್ತೆಯಾಗಿತ್ತು. 18 ಜನರನ್ನು ರಕ್ಷಿಸಲಾಗಿತ್ತು. 

* ಇದನ್ನೂ ಓದಿ: ದೋಣಿ ಮುಳುಗಿ ಎಂಟು ಮಂದಿ ಸಾವು

ಕೂರ್ಮಗಡದಲ್ಲಿ ನರಸಿಂಹ ದೇವರ ಜಾತ್ರೆ ಮುಗಿಸಿ ವಾಪಸಾಗುತ್ತಿದ್ದ ವೇಳೆ ಅಪ್ಪಳಿಸಿದ ಬೃಹತ್ ಅಲೆಗೆ ದೋಣಿ ಅಡಿಮೇಲಾಗಿತ್ತು.


ನಾಪತ್ತೆಯಾದವರ ಕುಟುಂಬ ಸದಸ್ಯರು ಆತಂಕದಲ್ಲಿ ನೋಡುತ್ತಿರುವುದು.

 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !