ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ತನ್ಯಪಾನ ಕೇಂದ್ರ ತಾಯಂದಿರಿಗೆ ಸಹಕಾರಿ’

Last Updated 29 ಜೂನ್ 2020, 13:09 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿನ ರೋಟರಿ ಕ್ಲಬ್ ಮತ್ತು ಭಾರತೀಯ ವೈದ್ಯಕೀಯ ಸಂಘದ ಘಟಕ ಜಂಟಿಯಾಗಿ ಪ್ರಾರಂಭಿಸಿದ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಸ್ತನ್ಯಪಾನ ಕೇಂದ್ರವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಹೊಸ ಬಸ್ ನಿಲ್ದಾಣದ ಕೇಂದ್ರವನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ ಸೋಮವಾರ ಉದ್ಘಾಟಿಸಿದರು.

ಸಾರ್ವಜನಿಕ ಪ್ರದೇಶದಲ್ಲಿ ಚಿಕ್ಕ ಮಕ್ಕಳಿಗೆ ಹಾಲುಣಿಸುವಾಗ ತಾಯಂದಿರುವ ಎದುರಿಸುವ ಸಮಸ್ಯೆ ಮನಗಂಡು, ರೋಟರಿ ಮತ್ತು ಐಎಂಎ ಈ ಕೇಂದ್ರ ಪ್ರಾರಂಭಿಸಿವೆ. ತಾಯಂದಿರಿಗೆ ಆಗುತ್ತಿದ್ದ ಮುಜುಗರ ತಪ್ಪಿಸಲು ಈ ಕೇಂದ್ರಗಳು ಸಹಕಾರಿಯಾಗಿವೆ. ಸರ್ಕಾರಿ ವ್ಯವಸ್ಥೆಯಲ್ಲಿ ಎಲ್ಲವನ್ನೂ ಒದಗಿಸಲು ಕಷ್ಟಸಾಧ್ಯ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಸಂಘಟನೆಗಳು ರಚನಾತ್ಮಕ ಕಾರ್ಯಕ್ಕೆ ಮುಂದಾಗಬೇಕು ಎಂದು ವಿ.ಎಸ್.ಪಾಟೀಲ ಹೇಳಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ, ರೋಟರಿ ಕ್ಲಬ್ ಅಧ್ಯಕ್ಷ ಡಾ.ಶಿವರಾಮ ಕೆ.ವಿ, ಕಾರ್ಯದರ್ಶಿ ಪಾಂಡುರಂಗ ಪೈ, ಪ್ರಮುಖರಾದ ಡಾ. ಗಜಾನನ ಭಟ್ಟ, ಡಾ.ತನುಶ್ರೀ, ಡಾ.ರಾಘವೇಂದ್ರ ಉಡುಪ, ಡಾ.ದಿನೇಶ ಹೆಗಡೆ, ಡಾ.ವಿನಾಯಕ ಭಟ್ಟ, ಡಾ. ಸುಮನ್ ಹೆಗಡೆ, ವಿಶಾಖ ಇಸಳೂರು, ನರಸಿಂಹ ಹೆಗಡೆ ಬಕ್ಕಳ, ಆರ್‌.ಎ.ಖಾಜಿ ಇದ್ದರು. ‌

ಸ್ತನ್ಯಪಾನ ಕೇಂದ್ರದ ಗೋಡೆಯ ಮೇಲೆ ಮಕ್ಕಳಿಗೆ ಹಾಕುವ ಲಸಿಕೆಗಳ ವಿವರ, ಮಗುವಿನ ತಾಯಿ ಹಾಲಿನ ಮಹತ್ವದ ಚಿತ್ರ ಸಹಿತ ವಿವರಣೆ ನೀಡಲಾಗಿದೆ. ನಗರದ ಮಧುರಾ ಇಂಡಸ್ಟ್ರೀಸ್‌ನ ಶ್ರೀಕಾಂತ ಹೆಗಡೆ ಕೇಂದ್ರದ ಯೋಜನೆ ರೂಪಿಸಿದ್ದಾರೆ. ಇದೇ ಮಾದರಿಯ ಕೇಂದ್ರವನ್ನು ಈ ಹಿಂದೆ ಮಾರಿಕಾಂಬಾ ದೇವಾಲಯದಲ್ಲಿ ಪ್ರಾರಂಭಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT