ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌದ್ಧ ಮುಖಂಡರಿಂದ ‘ಕೊರೊನಾ’ ಜಾಗೃತಿ

ಕೇರಳದ ಕಣ್ಣೂರು ಬದಲು ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣ
Last Updated 5 ಫೆಬ್ರುವರಿ 2020, 14:03 IST
ಅಕ್ಷರ ಗಾತ್ರ

ಮುಂಡಗೋಡ: ಕೇರಳದಲ್ಲಿ ಕೊರೊನಾ ವೈರಾಣು ಸೋಂಕು ಪ್ರಕರಣ ವರದಿಯಾದ ಕಾರಣ,ಮುಂಡಗೋಡದ ಟಿಬೆಟನ್ ನಿರಾಶ್ರಿತರ ಶಿಬಿರಕ್ಕೆ ಬರುವವರೂ ದಾರಿ ಬದಲಿಸಿದ್ದಾರೆ. ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬದಲು ಬೆಂಗಳೂರು ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಕೇರಳದಲ್ಲಿ ವೈರಾಣು ಸೋಂಕಿನ ಪ್ರಕರಣಗಳು ಕಂಡುಬರುವ ಮೊದಲು ಟಿಬೆಟನ್ನರು, ದೆಹಲಿಯಿಂದ ಕಣ್ಣೂರಿಗೆ ಬರುತ್ತಿದ್ದರು. ಅಲ್ಲಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದುಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದರು. ಅಮೆರಿಕಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಬೀಜಿಂಗ್ ಮೂಲಕ ಹೋಗುತ್ತಿದ್ದರು. ಆದರೆ, ಈಬೇರೆ ಊರುಗಳಿಗೆ ಪ್ರಯಾಣಿಸದಂತೆ ಇಲ್ಲಿನ ಶಿಬಿರಗಳ ನಿವಾಸಿಗಳಿಗೆ ಬೌದ್ಧ ಮುಖಂಡರು ಸೂಚಿಸಿದ್ದಾರೆ. ಅಲ್ಲದೇ ಹೆಚ್ಚಿನ ಟಿಬೆಟನ್‌ರು ಮುಖಗವಸು ಧರಿಸುತ್ತಿದ್ದಾರೆ.

ಕೊರೊನಾ ವೈರಾಣು ಟಿಬೆಟ್‌ಗೂವ್ಯಾಪಿಸದಂತೆ ಶಿಬಿರದಲ್ಲಿರುವಬಿಕ್ಕುಗಳು ನಿತ್ಯವೂ ಪೂಜೆಯಲ್ಲಿ ತೊಡಗಿದ್ದಾರೆ. ಇನ್ನೊಂದೆಡೆ ರೋಗನಿರೋಧಕ ಶಕ್ತಿ ಹೆಚ್ಚಿಸಬಲ್ಲದು ಎನ್ನಲಾಗಿರುವ ಕಪ್ಪುಗೋಲಿಯ (ಟಿಬೆಟನ್ ಔಷಧಿ) ವಾಸನೆಯನ್ನು ದಿನಕ್ಕೆ 4–6 ಬಾರಿ ಸ್ರವಿಸುತ್ತಿದ್ದಾರೆ.ಜೊತೆಗೇಟಿಬೆಟನ್‌ ವೈದ್ಯರು ಕೊರೊನಾ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

‘ಕೊರೊನಾ ವೈರಸ್ ಬಗ್ಗೆ ಪ್ರತಿ ಟಿಬೆಟನ್‌ರಿಗೂ ತಿಳಿವಳಿಕೆ ನೀಡಲು, ಟಿಬೆಟ್‌ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮುದ್ರಿತ ಭಿತ್ತಿಪತ್ರಗಳನ್ನು ಹಂಚಲಾಗುತ್ತಿದೆ. ಕೈ, ಬಾಯಿ ಸ್ವಚ್ಛ ಇಟ್ಟುಕೊಳ್ಳುವಂತೆ, ಮುಖಗವಸು ಧರಿಸಿಯೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. 360 ಮಾಸ್ಕ್‌ಗಳನ್ನು ಉಚಿತವಾಗಿ ನೀಡಲಾಗಿದೆ’ ಎನ್ನುತ್ತಾರೆ ಟಿಬೆಟನ್‌ ಡಿ.ಟಿ.ಆರ್ ಆಸ್ಪತ್ರೆಯ ಆಡಳಿತಾಧಿಕಾರಿ ನವಾಂಗ್ ತುಪ್ಟೆನ್.

‘ಗೋಮಾಂಗ್ ಬೌದ್ಧಮಂದಿರಕ್ಕೆ ನಾಲ್ವರುಮಂಗೋಲಿಯಾ ಹಾಗೂ ಒಬ್ಬರು ರಷ್ಯಾ ದೇಶದಿಂದ ಬಂದು ಹೋಗಿದ್ದರ ಮಾಹಿತಿ ಸಿಕ್ಕಿದೆ. ಉಳಿದ ಮೂರು ಬೌದ್ಧ ಮಂದಿರಗಳ ಮಾಹಿತಿ ಬರಬೇಕಾಗಿದೆ. ಆಸ್ಪತ್ರೆಗೆ ಬರುವ ರೋಗಿಯನ್ನು ಮುಖಗವಸು ಹಾಕಿಯೇ ತಪಾಸಣೆ ಮಾಡಲಾಗುತ್ತಿದೆ’ ಎಂದರು.

ವೈರಾಣು ಕುರಿತು ಸಭೆ:‘ತಾಲ್ಲೂಕುಆರೋಗ್ಯ ಇಲಾಖೆ ಹಾಗೂ ಡಿ.ಟಿ.ಆರ್ ಆಸ್ಪತ್ರೆಯ ಸಹಯೋಗದಲ್ಲಿ ಇಲ್ಲಿನ ಕಮ್ಯುನಿಟಿ ಹಾಲ್‌ನಲ್ಲಿ, ಕೊರೊನಾ ವೈರಾಣು ಕುರಿತು ಸೋಮವಾರ ಸಭೆ ನಡೆಸಲಾಗಿದೆ.10 ಕ್ಯಾಂಪ್‌ಗಳ ಒಂಬತ್ತು ಬೌದ್ಧ ಮಂದಿರಗಳ ಮುಖಂಡರು, ಟಿಬೆಟನ್ ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಶಿಕ್ಷಕ, ಪಾಲಕ ಸಂಘದ ಪದಾಧಿಕಾರಿಗಳು ಸೇರಿದಂತೆ ಹಲವರು ಭಾಗಿಯಾಗಿದ್ದರು’ ಎಂದು ಸ್ಥಳೀಯಕೇಂದ್ರೀಯಟಿಬೆಟನ್ಆಡಳಿತದಅಧ್ಯಕ್ಷ ಲಾಖ್ಪಾ ಸಿರಿಂಗ್ ಹೇಳಿದರು.

‘ಚೀನಾ ಸೇರಿದಂತೆ ಬೇರೆ ಯಾವುದೇ ದೇಶ ಹಾಗೂ ರಾಜ್ಯಗಳಿಂದ ಬಂದು ಹೋದವರ ಮಾಹಿತಿ ನೀಡಲು ಬೌದ್ಧ ಮಂದಿರಗಳ ಮುಖಂಡರಿಗೆ ಸೂಚಿಸಲಾಗಿದೆ. ವೈರಾಣು ಕಂಡುಬಂದಿರುವ ಪ್ರದೇಶಗಳಿಗೆ ಪ್ರಯಾಣಿಸದಂತೆ ಸೂಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT