ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ಬಸ್

ಭಾನುವಾರ, ಜೂಲೈ 21, 2019
21 °C

ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ಬಸ್

Published:
Updated:
Prajavani

ಶಿರಸಿ: ತಾಲ್ಲೂಕಿನ ಗೋಳಿಮಕ್ಕಿ ರಸ್ತೆಯಲ್ಲಿ ಹಣಜಿಮನೆ ಸಮೀಪ ಶನಿವಾರ ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕದ ಮೋರಿಗೆ ಬಿದ್ದು 30ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಎದುರಿನಿಂದ ಬಂದ ವಾಹನವನ್ನು ತಪ್ಪಿಸುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣದ ತಪ್ಪಿದ ಬಸ್ ಮೋರಿಗೆ ಜಾರಿದೆ. ನಂತರ ಬಸ್‌ ಅನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಯಿತು. ಎರಡೂ ಇಕ್ಕೆಲಗಳಲ್ಲಿ ಅಡಿಕೆ ತೋಟವಿದ್ದು, ನಡುವಿನ ರಸ್ತೆಯಲ್ಲಿ ಏಕಕಾಲಕ್ಕೆ ಒಂದು ಬಸ್ ಹೋಗುವಷ್ಟು ಅಗಲವಾದ ಜಾಗವಿದೆ. ಇದೇ ಕಾರಣಕ್ಕೆ ಅಪಘಾತ ಸಂಭವಿಸಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !