ಬಸ್–ಲಾರಿ ಡಿಕ್ಕಿ: 37 ಜನರಿಗೆ ಗಾಯ

7

ಬಸ್–ಲಾರಿ ಡಿಕ್ಕಿ: 37 ಜನರಿಗೆ ಗಾಯ

Published:
Updated:
Prajavani

ಕುಮಟಾ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಮಣಕಿ ಬಳಿ ಮಂಗಳವಾರ ಬಸ್– ಲಾರಿ ಡಿಕ್ಕಿಯಾಗಿ, ಲಾರಿ ಚಾಲಕನ ಬಲಪಾದ ತುಂಡಾಗಿದೆ. ಬಸ್ ಚಾಲಕ, ನಿರ್ವಾಹಕ ಸೇರಿ ಸುಮಾರು 37 ಜನರು ಗಾಯಗೊಂಡಿದ್ದಾರೆ.

ಲಾರಿ ಚಾಲಕ ತಮಿಳುನಾಡಿನ ವೇಲು ಮುರುಗನ್ ಎಂಬುವವರ ಪಾದ ತುಂಡಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಗೋಕರ್ಣದಿಂದ ಸಾಗರಕ್ಕೆ ಹೋಗುವ ಸಾಗರ ಡಿಪೊ ಬಸ್, ಎದುರು ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

‘ಗಾಯಗೊಂಡ ಎಲ್ಲರಿಗೂ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸಿ.ಟಿ ಸ್ಕ್ಯಾನಿಂಗ್ ಅಗತ್ಯವುಳ್ಳ ಆರು ಜನರನ್ನು ಹೊನ್ನಾವರದ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ’ ಎಂದು ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ ನಾಯ್ಕ ತಿಳಿಸಿದ್ದಾರೆ.

ತೀವ್ರ ಗಾಯಗೊಂಡ 14 ಜನರ ತುರ್ತು ಚಿಕಿತ್ಸೆಗೆ ರಾಜ್ಯ ಸಾರಿಗೆ ಇಲಾಖೆಯಿಂದ ಒಟ್ಟು ₹ 50,000 ನೀಡಲಾಗಿದೆ ಎಂದು ಘಟಕ ವ್ಯವಸ್ಥಾಪಕ ಎಸ್.ಜಿ.ಬಿರಾದಾರ ತಿಳಿಸಿದ್ದಾರೆ.

‘ರಾಷ್ಟ್ರೀಯ ಹೆದ್ದಾರಿ ವಿಸ್ತೀರ್ಣವಾಗದಿದ್ದರೆ ಹೀಗೆ ಪದೇಪದೇ ಅಪಘಾತಗಳು ಉಂಟಾಗಿ ಸಾವು–ನೋವು ಸಂಭವಿಸುವುದು ಸಾಮಾನ್ಯವಾಗುತ್ತದೆ. ವಿಶೇಷವಾಗಿ ಹಬ್ಬಗಳ ಸಂದರ್ಭದಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿರ್ವಹಿಸಲು ಪೊಲೀಸ್ ಹಾಗೂ ಸಾರಿಗೆ ಇಲಾಖೆ ವಿಶೇಷ ಕಾರ್ಯ ಯೋಜನೆ ರೂಪಿಸಬೇಕು’ ಎಂದು ಮುಖಂಡ ಸೂರಜ ನಾಯ್ಕ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !