ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ ಕಡಲ ತೀರದಲ್ಲಿ ಮತ್ತೊಂದು ಡಾಲ್ಫಿನ್ ಸಾವು

Last Updated 10 ಜುಲೈ 2022, 15:33 IST
ಅಕ್ಷರ ಗಾತ್ರ

ಕಾರವಾರ: ನಗರದ ಸುತ್ತಮುತ್ತ ಡಾಲ್ಫಿನ್‌ ಮೀನುಗಳ ಅಸಹಜ ಸಾವಿನ ಸರಣಿ ಮುಂದುವರಿದಿದೆ. ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಭಾನುವಾರ ಮತ್ತೊಂದು ಡಾಲ್ಫಿನ್‌ನ ಕಳೇಬರ ಕಂಡುಬಂದಿದೆ.

‘ಇಂಡೊ ಪೆಸಿಫಿಕ್ ಹಂಪ್‌ಬ್ಯಾಕ್’ ಪ್ರಬೇಧದ ಡಾಲ್ಫಿನ್ ಇದಾಗಿದ್ದು, ಸುಮಾರು ಏಳು ಅಡಿಗಳಷ್ಟು ಉದ್ದವಿತ್ತು. ಶರೀರದ ಒಂದಷ್ಟು ಭಾಗ ಕೊಳೆತಿದ್ದು, ಮೃತಪಟ್ಟು ಕೆಲವು ದಿನಗಳಾಗಿರುವ ಸಾಧ್ಯತೆಯಿದೆ. ಮೀನುಗಾರರ ಬಲೆಗೆ ಸಿಲುಕಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಮೋದ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT