ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರಂಟೈನ್ ನಿಯಮ ಉಲ್ಲಂಘನೆ: ದೂರು ದಾಖಲು

Last Updated 24 ಮಾರ್ಚ್ 2020, 13:01 IST
ಅಕ್ಷರ ಗಾತ್ರ

ಕಾರವಾರ:ಮನೆಯಲ್ಲೇ ಪ್ರತ್ಯೇಕವಾಗಿರಬೇಕು (ಹೋಮ್ ಕ್ವಾರಂಟೈನ್) ಎಂಬ ಸೂಚನೆಯನ್ನು ಪಾಲಿಸದೇ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬರವಿರುದ್ಧ ಜೊಯಿಡಾ ತಾಲ್ಲೂಕಿನ ರಾಮನಗರ ಠಾಣೆ ಪೊಲೀಸರು ಮಂಗಳವಾರ ದೂರು ದಾಖಲಿಸಿದ್ದಾರೆ.

ಜಗಲಬೇಟ ಗ್ರಾಮದ ಚರಣರಾಜ ಕೇಶವ ಖಾರ್ವಿ (30) ವಿರುದ್ಧ ದೂರು ದಾಖಲಾಗಿದೆ. ಅವರು ಮಾರ್ಚ್ 13ರಂದು ಕುವೈತ್‌ನಿಂದ ವಾಪಸಾಗಿದ್ದರು. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನಿಲ ಬಸಣ್ಣ ಪಾಟೀಲ, ಮರುದಿನ ಅವರ ಮನೆಗೆ ಹೋಗಿ 14 ದಿನಗಳ ಹೋಮ್ ಕ್ವಾರಂಟೈನ್ ಬಗ್ಗೆ ತಿಳಿಸಿಬಂದಿದ್ದರು. ಅಲ್ಲದೇ ಅವರಿಗೆ ಮುಖಗವಸು ನೀಡಿ, ಹೊರಗಡೆ ತಿರುಗಾಡದೇ ಮನೆಯಲ್ಲೇ ಪ್ರತ್ಯೇಕ ಕೋಣೆಯಲ್ಲಿ ಇರುವಂತೆ ಸೂಚಿಸಿದ್ದರು.

ಚರಣರಾಜ ಅವರು ಈ ಸೂಚನೆಗಳನ್ನು ಪಾಲಿಸದೇ ಬ್ಯಾಂಕ್‌ಗೆ ಹೋಗುತ್ತ, ಹೊರಗಡೆ ಸಂಚರಿಸುತ್ತಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ವೈದ್ಯಾಧಿಕಾರಿಯು ದೂರು ನೀಡಿದ್ದಾರೆ. ರಾಮನಗರ ಠಾಣೆಯ ಪಿಎಸ್‌ಐ ಕಿರಣ ಪಾಟೀಲ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT