ಸೋಮವಾರ, ಅಕ್ಟೋಬರ್ 18, 2021
23 °C

ಇ.ಎಸ್.ಐ. ಚಿಕಿತ್ಸಾಲಯಕ್ಕೆ ತಾತ್ವಿಕ ಅನುಮೋದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಸಂಸದ ಅನಂತಕುಮಾರ ಹೆಗಡೆ ಮನವಿಗೆ ಸ್ಪಂದಿಸಿ ಶಿರಸಿ ಹಾಗೂ ಕುಮಟಾದಲ್ಲಿ ಇ.ಎಸ್.ಐ. ಚಿಕಿತ್ಸಾಲಯ ಸ್ಥಾಪನೆಗೆ ತಾತ್ವಿಕ ಅನುಮೋದನೆ ನೀಡಿದ್ದಾಗಿ ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಸಂಸದರಿಗೆ ಪತ್ರ ಬರೆದಿದ್ದಾರೆ.

‘ರಾಜ್ಯ ಸರ್ಕಾರದಿಂದ ಶಿರಸಿ, ಕುಮಟಾದಲ್ಲಿ ಚಿಕಿತ್ಸಾಲಯ ಸ್ಥಾಪನೆಗೆ ಅನುಮತಿ ಕೋರಿ ಪ್ರಸ್ತಾವ ಸಲ್ಲಿಕೆಯಾಗಿತ್ತು. ಪ್ರಸ್ತಾವಿತ ಸ್ಥಳ ಜನಸಂಖ್ಯೆ, ಕಾರ್ಮಿಕರ ಸಂಖ್ಯೆ ಆಧಾರದಲ್ಲಿ ಇ.ಎಸ್.ಐ. ನಿಯಮಾವಳಿ ಪ್ರಕಾರ ಚಿಕಿತ್ಸಾಲಯ ಸ್ಥಾಪನೆಗೆ ಅರ್ಹವಾಗಿವೆ. ಹೀಗಾಗಿ ಅನುಮೋದನೆ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ’ ಎಂದು ಸಂಸದರ ಕಚೇರಿ ನೀಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು