ಸೋಮವಾರ, ಜನವರಿ 27, 2020
16 °C

ರಿಯರ್ ಅಡ್ಮಿರಲ್ ಕೆ.ಪಿ.ಅರವಿಂದನ್ ಅಧಿಕಾರ ಸ್ವೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಇಲ್ಲಿನ ಸೀಬರ್ಡ್ ನೌಕಾನೆಲೆಯ ಹಡಗು ದುರಸ್ತಿ ಯಾರ್ಡ್‌ನ ಅಡ್ಮಿರಲ್ ಸೂಪರಿಂಟೆಂಡೆಂಟ್ ಆಗಿ ರಿಯರ್ ಅಡ್ಮಿರಲ್ ಕೆ.ಪಿ.ಅರವಿಂದನ್ ಸೋಮವಾರ ಅಧಿಕಾರ ಸ್ವೀಕರಿಸಿದರು. ಈ ಮೊದಲು ರಿಯರ್ ಅಡ್ಮಿರಲ್ ಎ.ಪಿ.ಕುಲಕರ್ಣಿ ಆ ಜವಾಬ್ದಾರಿಯಲ್ಲಿದ್ದರು.

ರಿಯರ್ ಅಡ್ಮಿರಲ್ ಕೆ.ಪಿ.ಅರವಿಂದನ್ ಅವರು ಭಾರತೀಯ ನೌಕಾಪಡೆಯ ಎಂಜಿನಿಯರಿಂಗ್ ವಿಭಾಗಕ್ಕೆ 1987ರಲ್ಲಿ ಸೇರ್ಪಡೆಯಾದರು. ಲೋನವಾಲದ ನೌಕಾಪಡೆಯ ಎಂಜಿನಿಯರಿಂಗ್ ಕಾಲೇಜು ‘ಐಎನ್ಎಸ್ ಶಿವಾಜಿ’ಯಲ್ಲಿ ಬಿ.ಟೆಕ್ ಹಾಗೂ ಮುಂಬೈನ ಎನ್‌.ಐ.ಟಿ.ಐ.ಇ ಕಾಲೇಜಿನಲ್ಲಿ ಕೈಗಾರಿಕಾ ಎಂಜಿನಿಯರಿಂಗ್‌ ವಿಷಯದಲ್ಲಿ ಎಂ.ಟೆಕ್ ಅಧ್ಯಯನ ಮಾಡಿದ್ದಾರೆ. 

ನೌಕಾಪಡೆಯಲ್ಲಿ 30 ವರ್ಷಗಳಿಗೂ ಅಧಿಕ ಸೇವ ಅವಧಿಯಲ್ಲಿ ಅವರು, ಐಎನ್ಎಸ್ ಅಂಡಮಾನ್‌ನಲ್ಲಿ, ಐಎನ್ಎಸ್ ರಜಪೂತ್, ಐಎನ್ಎಸ್ ಕಿರ್ಪಾಣ್ ಹಾಗೂ ಐಎನ್ಎಸ್ ರಂಜಿತ್‌ನಲ್ಲಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇದರೊಂದಿಗೆ ನೌಕಾಪಡೆಯ ವಿವಿಧ ಜವಾಬ್ದಾರಿಗಳನ್ನೂ ಅವರು ನಿಭಾಯಿಸಿದ್ದಾರೆ. 

ಅವರ ಕರ್ತವ್ಯ ನಿಷ್ಠೆಯನ್ನು ಪರಿಗಣಿಸಿ ‘ಚೀಫ್ ಆಫ್ ನೇವಲ್ ಸ್ಟಾಫ್ ಕಮಂಡೇಷನ್’, ‘ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ (ಪಶ್ಚಿಮ) ಕಮಂಡೇಷನ್’, ಮತ್ತು ‘ವಿಶಿಷ್ಟ ಸೇವಾ ಪ‍ದಕ’ ಗೌರವಗಳನ್ನು ಪ್ರದಾನ ಮಾಡಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು