ಮಂಗಳವಾರ, ಅಕ್ಟೋಬರ್ 22, 2019
25 °C
ಬೀದಿ ಬದಿ ಕಸ ಹೆಕ್ಕಿ ಮಾದರಿಯಾದ ಮಕ್ಕಳ ತಂಡ

ಬೆಳಿಗ್ಗೆ ಬೇಗ ಎದ್ದು ಊರ ಸ್ವಚ್ಛತೆ ಮಾಡ್ತಾರೆ ಈ ಮಕ್ಕಳು

Published:
Updated:
Prajavani

ಶಿರಸಿ: ಈ ಮಕ್ಕಳು ಬೆಳಿಗ್ಗೆ ಬೇಗ ಎದ್ದು, ಊರಿನ ಬೀದಿಯನ್ನು ಸುತ್ತಿದ್ದಾರೆ. ಬೀದಿ ಬದಿಯಲ್ಲಿ ಬಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಚೀಲದಲ್ಲಿ ತುಂಬಿಸಿಕೊಳ್ಳುತ್ತ ಮುಂದೆ ಸಾಗಿದ್ದಾರೆ. ಚೀಲ ಭಾರವಾದ ಮೇಲೆ ಅದನ್ನು ಸೈಕಲ್ ಮೇಲೆ ಹೇರಿಕೊಂಡು ಊರ ತುದಿ ಕೊಂಡೊಯ್ದಿದ್ದಾರೆ !

ಇತ್ತೀಚೆಗೆ ಗಂಗಾವಳಿ ನದಿಯ ಪ್ರವಾಹದಿಂದ ಹಾನಿಗೊಳಗಾಗಿರುವ ಅಂಕೋಲಾ ತಾಲ್ಲೂಕು ಡೋಂಗ್ರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಗ್ಗಾರಿನ ಮೂರ್ನಾಲ್ಕು ಮಕ್ಕಳು ಭಾನುವಾರದ ರಜೆಯನ್ನು ಸ್ವಚ್ಛತಾ ಆಂದೋಲನ ನಡೆಸುವ ಮೂಲಕ ಸದುಪಯೋಗಪಡಿಸಿಕೊಂಡಿದ್ದಾರೆ.

ಹೆಗ್ಗಾರ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ತೇಜಸ್ವಿ ಗಾಂವಕರ ನೇತೃತ್ವದಲ್ಲಿ ಸಂಕೇತ ಪಟಗಾರ, ದರ್ಶನ ಸಿದ್ದಿ, ವಿನಯ ಭಟ್ಟ ಇನ್ನೂ ಕೆಲವು ಮಕ್ಕಳು ಸುಮಾರು ಎರಡು ಕಿ.ಮೀ ವ್ಯಾಪ್ತಿಯಲ್ಲಿ ಬೀದಿ ಬದಿಯ ಕಸವನ್ನು ಹೆಕ್ಕಿ ಸ್ವಚ್ಛಗೊಳಿಸಿದ್ದಾರೆ. ಒಮ್ಮೆಲೇ ಜಾಗೃತರಾದ ಮಕ್ಕಳನ್ನು ಕಂಡ ಊರವರು, ’ಶಾಲೆಯಲ್ಲಿ ಶಿಕ್ಷಕರು ಏನಾದರೂ ಪ್ರಾಜೆಕ್ಟ್‌ ಅಥವಾ ಅಸೈನ್‌ಮೆಂಟ್ ಕೊಟ್ಟಿದ್ದಾರಾ’ ಎಂದು ಪ್ರಶ್ನಿಸಿದರು.

‘ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿರುವ ಸ್ವಚ್ಛ ಭಾರತ ಯೋಜನೆ ಸಾಕಾರಗೊಳಿಸಲು ನಾವು ಈ ಕಾರ್ಯ ನಡೆಸಿದ್ದೇವೆ. ಕಸವನ್ನು ಒಟ್ಟುಗೂಡಿಸಿ ಅದರ ವಿಲೇವಾರಿ ಮಾಡಿದ್ದೇವೆ’ ಎಂದು ಯಕ್ಷಗಾನ ಕಲಾವಿದನೂ ಆಗಿರುವ, ತಂಡದ ನಾಯಕ ತೇಜಸ್ವಿ ಉತ್ತರಿಸಿದ್ದಾನೆ. ‘ಮಕ್ಕಳ ಸ್ವಚ್ಛತಾ ಕಾರ್ಯ ಮಾದರಿಯಾಗಿದೆ. ಕಂಡಲ್ಲಿ ಕಸ ಎಸೆಯುವವರು ಮಕ್ಕಳಿಂದ ಪಾಠ ಕಲಿಯಬೇಕು’ ಎಂದು ಊರವರು ಪ್ರತಿಕ್ರಿಯಿಸಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)