ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ:ಕ್ರಿಸ್ಮಸ್ ಹಬ್ಬಕ್ಕೆ ಸಿಂಗಾರಗೊಂಡ ಚರ್ಚ್

Last Updated 24 ಡಿಸೆಂಬರ್ 2021, 15:43 IST
ಅಕ್ಷರ ಗಾತ್ರ

ಶಿರಸಿ: ಏಸುಕ್ರಿಸ್ತನ ಜನ್ಮದಿನವಾದ ಡಿ.25ರಂದು ಕ್ರಿಸ್‍ಮಸ್ ಹಬ್ಬ ಆಚರಿಸಲು ನಗರದ ಚರ್ಚುಗಳಲ್ಲಿ ಗೋದಲಿಗಳು ಸಿದ್ಧಗೊಂಡಿವೆ. ಚರ್ಚ್ ಗಳನ್ನು ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.

ಇಲ್ಲಿನ ಸೆಂಟ್ ಅಂತೋನಿ ಚರ್ಚ್, ಸೆಂಟ್ ಪೌಲ್ ಮರಥೋಮಾ ಚರ್ಚ್, ಡಾನ್ ಬಾಸ್ಕೊ ಚರ್ಚ್, ಇನ್ನತರ ಕಡೆಗಳಲ್ಲಿ ಅಲಂಕೃತ ಆಕಾಶಬುಟ್ಟಿ ಅಳವಡಿಸಲಾಗಿದೆ. ಅವುಗಳ ಮೇಲೆ ಹಬ್ಬದ ಶುಭಶಯ ಕೋರುವ ಸಂದೇಶ ಬರೆದು ತೂಗುಬಿಡಲಾಗಿದೆ.

ಹಬ್ಬದ ಪ್ರಯುಕ್ತ ಶುಕ್ರವಾರ ಮಧ್ಯರಾತ್ರಿ ವಿಶೇಷ ಪ್ರಾರ್ಥನೆ ಜರುಗಿದ್ದು, ಜನರು ಸಂಜೆಯಿಂದಲೇ ವಿವಿಧ ನೃತ್ಯ, ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿರುವದು ಕಂಡುಬಂತು. ಯುವತಿಯರು ಚರ್ಚ್ ಗಳ ಆವರಣದಲ್ಲಿ ಕ್ಯಾರಲ್ ಹಾಡುಗಳನ್ನು ಹಾಡುವ ಸಲುವಾಗಿ ಪೂರ್ವಭಾವಿ ಸಿದ್ಧತೆಯಲ್ಲಿ ತೊಡಗಿದ್ದರು.

‘ಹಬ್ಬದ ವೇಳೆ ಏಸುಕ್ರಿಸ್ತನ ಸಂದೇಶಗಳನ್ನು ಜನರಿಗೆ ಮನದಟ್ಟು ಮಾಡುತ್ತೇವೆ. ಮಕ್ಕಳಿಗೆ, ಹಿರಿಯರಿಗೆ ಪ್ರತ್ಯೇಕ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವದು. ಶನಿವಾರ ಚರ್ಚ್ ನಲ್ಲಿ ಪವಿತ್ರ ಭೋಜನವೂ ಇರಲಿದೆ’ ಎಂದು ಸೆಂಟ್ ಪೌಲ್ ಮಾರಥೋಮಾ ಚರ್ಚ್‍ನ ಫಾದರ್ ಜಾನ್ಸನ್ ಉನ್ನಿಸನ್ ತಿಳಿಸಿದರು.

‘ಕೋವಿಡ್ ಕಾರಣಕ್ಕೆ ಸರಳ ಆಚರಣೆಗೆ ಒತ್ತು ನೀಡಲಾಗಿದೆ. ಜನದಟ್ಟಣೆ ಉಂಟಾಗದಂತೆ ಎಚ್ಚರವಹಿಸಲಾಗುವದು. ಹಬ್ಬದ ಪ್ರಾರ್ಥನೆ ವೇಳೆ ಕೋವಿಡ್ ನಿಯಂತ್ರಣಕ್ಕಾಗಿಯೂ ಪ್ರಾರ್ಥಿಸುತ್ತೇವೆ. ಸರಳ ಗೋದಲಿ, ಅಲಂಕಾರ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT