ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಡೇಲಿ ನಗರಸಭೆ ಉಪ ಚುನಾವಣೆ: ಕಾಂಗ್ರೆಸ್‌ನ ಸುಗಂಧಾ ಗೆಲುವು

Last Updated 31 ಡಿಸೆಂಬರ್ 2021, 8:35 IST
ಅಕ್ಷರ ಗಾತ್ರ

ದಾಂಡೇಲಿ: ದಾಂಡೇಲಿ ನಗರಸಭೆಯ 18ನೇ ವಾರ್ಡ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಗಂಧಾ ಪ್ರಕಾಶ ಕಾಂಬಳೆ ಜಯ ಸಾಧಿಸಿದ್ದಾರೆ.

ಪರಿಶಿಷ್ಟ ಜಾತಿಯ ಮಹಿಳೆಗೆ ಮಿಸಲಾಗಿದ ಈ ವಾರ್ಡ್‌ನಲ್ಲಿ ಸುಗಂಧಾ ಅವರು 466 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪದ್ಮಾ ಅಶೋಕ ಭೋವಿ 165 ಮತ ಪಡೆದು ಪರಾಭವಗೊಂಡಿದ್ದಾರೆ. 8 ನೋಟಾ ಮತಗಳು ಸೇರಿದಂತೆ 639 ಮತಗಳು ಚಲಾವಣೆಯಾಗಿವೆ.

ಕಾಂಗ್ರೆಸ್ ಪಕ್ಷದ ಪ್ರಾಬಲ್ಯ ಇರುವ ಇಲ್ಲಿ ಬಿಜೆಪಿ ತನ್ನ ಎಲ್ಲ ಶಕ್ತಿ ಪ್ರದರ್ಶನ ಮಾಡಿದರೂ ಅಭ್ಯರ್ಥಿ ಕೇವಲ 165 ಮತಗಳಿಗೆ ಸಮಾಧಾನ ಪಡುವಂತಾಗಿದೆ. ಕಾಂಗ್ರೆಸ್ ಪಕ್ಷ ತನ್ನ ಸ್ಥಾನವನ್ನು ಮತ್ತೆ ಭದ್ರಪಡಿಸಿಕೊಂಡಿದೆ.

ತಹಶೀಲ್ದಾರ್ ಶೈಲೇಶ ಪರಮಾನಂದ ನೇತೃತ್ವದಲ್ಲಿ ನಗರಸಭೆ ಸಭಾಭವನದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು.

ಪಕ್ಷಗಳ ಬಲಾಬಲ: ದಾಂಡೇಲಿಯ ನಗರಸಭೆಯ 31 ವಾರ್ಡ್‌ಗಳಲ್ಲಿ 16 ಸ್ಥಾನಗಳನ್ನು ಗೆದ್ದು ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ 4 ಪಕ್ಷೇತರರು ಬೆಂಬಲವನ್ನು ನೀಡಿದ್ದಾರೆ.
ಪ್ರಸ್ತುತ ಬಿಜೆಪಿ 11 ಸ್ಥಾನಗಳನ್ನು ಹೊಂದಿದ್ದು. ಇದು ಕಾಂಗ್ರೆಸ್ ಗೆ ನಿರೀಕ್ಷಿತ ಫಲಿತಾಂಶ ಆಗಿತ್ತು. ಬಿಜೆಪಿ 11 ಸ್ಥಾನ ಹೊಂದಿದೆ.

ಬಿಜಿಪಿ ಆಡಳಿತದಿಂದ ಬೇಸತ್ತ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದು ಸುಗಂಧಾ ಪ್ರಕಾಶ ಕಾಂಬಳೆ ಹೇಳಿದರು.

ಕಳೆದ ಬಾರಿ ಈ ವಾರ್ಡಿನಲ್ಲಿ ನಮ್ಮ ಪಕ್ಷ ಅತಿ ಕಡಿಮೆ ಮತಗಳನ್ನು ಪಡೆದುಕೊಂಡಿತ್ತು .ಈ ಬಾರಿ 165 ಮತಗಳನ್ನು ಪಡೆಯುವ ಮೂಲಕ ಜನರಿಗೆ ಹತ್ತಿರವಾಗಿದ್ದೇವೆ. ಪಕ್ಷದ ನಾಯಕರ ನೇತೃತ್ವದಲ್ಲಿ ಮುಂದಿನ ಚುನಾವಣೆಯಲ್ಲಿ ಜಯಗಳಿಸಲು ಪ್ರಯತ್ನಿಸುತ್ತೇವೆ ಎಂದು ದಾಂಡೇಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಗುರು ಮಠಪತಿ ಹೇಳಿದರು.

ನಗರಸಭೆಯ ಸದಸ್ಯೆ ನೀಲವ್ವ ಬಂಡಿವಡ್ಡರ ನಿಧನದಿಂದಾಗಿ ಆ ಸ್ಥಾನ ತೆರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT