ಗುರುವಾರ , ನವೆಂಬರ್ 21, 2019
22 °C

ಎರಡನೇ ದಿನವೂ ಸಂಪರ್ಕ ಕಡಿತ

Published:
Updated:
Prajavani

ಕಾರವಾರ: ಜಿಲ್ಲೆಯ ವಿವಿಧೆಡೆ ಮಂಗಳವಾರ ಮಳೆಯಾಗಿದೆ. ಮುಂಡಗೋಡ ತಾಲ್ಲೂಕಿನ ಓಣಿಕೇರಿ ಗ್ರಾಮದಲ್ಲಿ ಬಿರುಸಾದ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದೆ.

ಶಿಡ್ಲಗುಂಡಿ ಸಮೀಪ ಬೇಡ್ತಿ ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಇಲ್ಲಿನ ತಾತ್ಕಾಲಿಕ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಹೀಗಾಗಿ ಸತತ ಎರಡನೇ ದಿನವೂ ಯಲ್ಲಾಪುರ– ಮುಂಡಗೋಡ ನಡುವೆ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಹಲವೆಡೆ ಭತ್ತದ ಗದ್ದೆಗಳಲ್ಲಿ ನೀರು ತುಂಬಿದ್ದು, ಪೈರು ನೆಲಕಚ್ಚಿದೆ.

ಉಳಿದಂತೆ ಸಿದ್ದಾಪುರ, ಯಲ್ಲಾಪುರ, ಹೊನ್ನಾವರ ಸುತ್ತಮುತ್ತ ಕೂಡ ಮಳೆಯಾಗಿದೆ. ಕಾರವಾರದಲ್ಲಿ ಸೋಮವಾರ ತಡರಾತ್ರಿ ಸಾಧಾರಣ ಮಳೆಯಾಯಿತು. ಹಾನಿಯಾದ ವರದಿಯಾಗಿಲ್ಲ.

ಪ್ರತಿಕ್ರಿಯಿಸಿ (+)