ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋವಿಡ್ ನಿಯಂತ್ರಣ ಸರ್ಕಾರದ ಕೆಲಸ’

ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿಕೆಗೆ ಬ್ಲಾಕ್ ಕಾಂಗ್ರೆಸ್ ತಿರುಗೇಟು
Last Updated 19 ಸೆಪ್ಟೆಂಬರ್ 2020, 16:28 IST
ಅಕ್ಷರ ಗಾತ್ರ

ಜೊಯಿಡಾ: ‘ಕೋವಿಡ್ ನಿಯಂತ್ರಿಸು ವುದು ಶಾಸಕರ ಕೆಲಸವಲ್ಲ. ಸರ್ಕಾರದ ಕೆಲಸ. ರಾಜ್ಯ ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಜೊಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬ್ಗಾರ್ ಹೇಳಿದರು.

ಜೊಯಿಡಾದಲ್ಲಿ ಬ್ಲಾಕ್ ಕಾಂಗ್ರೆಸ್ ಶನಿವಾರ ನಡೆಸಿದಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕೋವಿಡ್ ನಿಯಂತ್ರಣ ವಿಚಾರದಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಅವರನ್ನು ಟೀಕಿಸುವ ಹಾಗೂ ಅವರ ಮೇಲೆ ಆರೋಪಗಳನ್ನು ಮಾಡುವ ನೈತಿಕತೆ ಮಾಜಿ ಶಾಸಕ ಸುನೀಲ್ ಹೆಗಡೆ ಅವರಿಗೆ ಇಲ್ಲ’ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದೇಶಪಾಂಡೆ ಅವರನ್ನು ಟೀಕಿಸಿದ್ದ ಸುನೀಲ್ ಹೆಗಡೆ, ಮರಳು ಸಾಗಣೆ ಸ್ಥಗಿತಗೊಳಿಸಿದರೆ ಹೋರಾಟ ನಡೆಸುವುದಾಗಿ ಹೇಳಿದ್ದರು.

ಇದಕ್ಕೆ ಪ್ರತಿಯಾಗಿ, ‘ಈ ಹಿಂದೆ ₹ 15,000–₹16,000ಕ್ಕೆ ಸಿಗುತ್ತಿದ್ದ ಮರಳು ಇಂದು ಬಡವರ, ಜನ ಸಾಮಾನ್ಯರ ಕೈಗೆಟುಕದಂತಾಗಿದೆ. ಮಧ್ಯವರ್ತಿ ಗಳು ಪ್ರತಿ ಲಾರಿಗೆಇಂತಿಷ್ಟು ಎಂದು ಕೆಲವರಿಗೆ ಹಫ್ತಾ ನೀಡಲು ಹಾಗೂ ತಮ್ಮ ಲಾಭಕ್ಕಾಗಿ ಮಾಡುತ್ತಿರುವ ಅಕ್ರಮವೇ ಕಾರಣ’ ಎಂದು ಸದಾನಂದ ದಬ್ಗಾರ್ ಆರೋಪಿಸಿದರು.

‘ಜೊಯಿಡಾ ಇಂದು ಎಲ್ಲ ಕ್ಷೇತ್ರಗ ಳಲ್ಲೂ ಅಭಿವೃದ್ಧಿ ಸಾಧಿಸಿದೆ. ಅದಕ್ಕೆ ದೇಶಪಾಂಡೆ ಅವರೇ ಕಾರಣ’ ಎಂದು ಜೊಯಿಡಾ ಜಿಲ್ಲಾ ಪಂಚಾಯಿತಿ ಸದಸ್ಯ ರಮೇಶ ನಾಯ್ಕ ಹೇಳಿದರು.

ಕಾಂಗ್ರೆಸ್ಮಹಿಳಾ ಘಟಕದ ಅಧ್ಯಕ್ಷೆ ರಾಜಶ್ರೀ ಕುಂಬಾರ,ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ವಿಜಯ ಪಂಡಿತ, ಸದಸ್ಯ ಬಲವಂತ ದೇಸಾಯಿ, ಮುಖಂಡರಾದ ಸುಹಾಸ ದೇಸಾಯಿ, ಸುನೀಲ್ ಗಾವಡೆ, ವಿನಯ ದೇಸಾಯಿ, ಮಾರುತಿ ಪಾಟೀಲ್, ಸತೀಶ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT