ಗುರುವಾರ , ಮಾರ್ಚ್ 23, 2023
21 °C

ಗೋಕರ್ಣ: ಗುಡ್ಡ ಕುಸಿತ– ಮಣ್ಣು ಕೆಲಸದ ಗುತ್ತಿಗೆದಾರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕರ್ಣ: ಇಲ್ಲಿಯ ಸಮೀಪದ ಚೌಡಗೇರಿಯ ಬಳಿ  ಮಂಗಳವಾರ ಮಣ್ಣು ತೆಗೆಯುತ್ತಿರುವಾಗ  ಆಕಸ್ಮಿಕವಾಗಿ ಮಣ್ಣಿನ ಗುಡ್ಡ ಕುಸಿದು  ಒಬ್ಬರು  ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಅಂಕೋಲಾದ  ಸೀಳ್ಯಾ ಗ್ರಾಮದ ಮೋಹನದಾಸ ಎಚ್. ನಾಯಕ (56) ಎಂದು ಗುರುತಿಸಲಾಗಿದೆ.

ಗುಡ್ಡದ ಮಣ್ಣು ತೆರವುಗೊಳಿಸುವ ಗುತ್ತಿಗೆ ಪಡೆದಿದ್ದ ಅವರು ಮಣ್ಣು ತೆಗೆಯುತ್ತಿರುವುದನ್ನು  ವಿಕ್ಷಿಸುತ್ತಿದ್ದಾಗ  ಒಮ್ಮೆಲೆ  ಮಣ್ಣು ಕುಸಿದು  ಬಿತ್ತೆನ್ನಲಾಗಿದೆ. ಮಣ್ಣಿನ ಅಡಿಗೆ ಸಿಲುಕಿ ಮೇಲೇಳಲಾಗದೇ  ಸಾವನ್ನಪ್ಪಿದ್ದಾರೆ ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ. ಮೃತರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ.

ಸೂಕ್ತ  ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ  ನಿರ್ಲಕ್ಷವಹಿಸಿದ ಆರೋಪದಡಿ ಜಾಗದ ಮಾಲೀಕರು, ಜೆ.ಸಿ.ಬಿ. ನಿರ್ವಹಣೆ  ಮಾಡುತ್ತಿದ್ದವರ ಮೇಲೆ ದೂರು ದಾಖಲಿಸಲಾಗುವುದು ಎಂದು  ಪಿ.ಎಸ್. ಐ. ನವೀನ್ ನಾಯ್ಕ ತಿಳಿಸಿದ್ದಾರೆ.

ಸಂಬಂಧಪಟ್ಟ ಇಲಾಖೆಯಿಂದ  ಮಣ್ಣು ತೆಗೆಯಲು ಅನುಮತಿ ಪಡೆದಿದ್ದಾರೆಯೋ ಅಥವ ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದಾರೆಯೋ ಎನ್ನುವುದರ ಬಗ್ಗೆಯೂ ಪರಿಶೀಲನೆ  ನಡೆಸುವಂತೆ  ಸಾರ್ವಜನಿಕರು ಆಗ್ರಹಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು