ಗುರುವಾರ , ಏಪ್ರಿಲ್ 9, 2020
19 °C
ದುಬೈನಿಂದ ಮರಳಿದ ಯುವಕನ ಮನೆಗೆ ಭೇಟಿ ನೀಡಿದ ಅಧಿಕಾರಿಗಳು

ಆತಂಕ ಸೃಷ್ಟಿಸಿದ ಕೊರೊನಾ ವೈರಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ತಾಲ್ಲೂಕಿನ ಮೇಲಿನ ಇಸಳೂರಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಂದಿದ್ದ ವಿದ್ಯಾರ್ಥಿಯೊಬ್ಬ ಶುಕ್ರವಾರ ತರಗತಿಯಲ್ಲಿ ಕೆಮ್ಮಿದ ಪರಿಣಾಮ, ಉಳಿದ ಮಕ್ಕಳ ಪಾಲಕರು ಆತಂಕಗೊಂಡು ಶಾಲೆಯಲ್ಲಿ ಜಮಾಯಿಸಿ, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ವಾತಾವರಣ ತಿಳಿಗೊಳಿಸಿದರು.

ದುಬೈನಲ್ಲಿ ಕೆಲಸದಲ್ಲಿದ್ದ ಇಸಳೂರಿನ ಯುವಕನೊಬ್ಬ ಮಾ.4ರಂದು ಊರಿಗೆ ಮರಳಿದ್ದ. ಊರಿಗೆ ಬಂದ ಆತನ ಬಳಿ, 14 ದಿನ ಮನೆಯಲ್ಲೇ ಇರುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದರು. ಆದರೆ, ಹೊಟ್ಟೆಪಾಡಿಗಾಗಿ ಈ ಯುವಕ ಕೆಲಸಕ್ಕೆ ಹೋಗುತ್ತಿದ್ದ. ಈ ಯುವಕನ ಪಕ್ಕದ ಮನೆಯ ಬಾಲಕನೊಬ್ಬನಿಗೆ ಥಂಡಿ, ಕೆಮ್ಮು ಕಾಣಿಸಿಕೊಂಡಿತ್ತು. ಅದರ ನಡುವೆಯೇ ಶಾಲೆಗೆ ಬಂದಿದ್ದ ಬಾಲಕನಿಗೆ, ಅನಾರೋಗ್ಯವಾಗಿರುವ ವಿಷಯ ಊರೆಲ್ಲ ಹರಡಿತು. ದುಬೈನಿಂದ ಬಂದ ಯುವಕನ ಪಕ್ಕದ ಮನೆಯ ಬಾಲಕನಾಗಿದ್ದರಿಂದ, ಶಾಲೆಗೆ ಮಕ್ಕಳನ್ನು ಕಳುಹಿಸಿದ ಪಾಲಕರು ಆತಂಕಗೊಂಡರು. 

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ ಶಾಲೆಗೆ ಭೇಟಿ ನೀಡಿ, ಪಾಲಕರಿಗೆ ವಿಷಯ ಮನವರಿಕೆ ಮಾಡಿದರು. ನಂತರ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ಟ, ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ ಅವರು ಆಂಬುಲೆನ್ಸ್ ಸಹಿತ ಸ್ಥಳಕ್ಕೆ ಭೇಟಿ ನೀಡಿದರು. ದುಬೈನಿಂದ ಬಂದಿರುವ ಯುವಕ ಆರೋಗ್ಯವಾಗಿರುವುದನ್ನು ದೃಢಪಡಿಸಿಕೊಂಡರಲ್ಲದೇ, ಇನ್ನು ನಾಲ್ಕು ದಿನಗಳವರೆಗೆ ಮನೆಯಲ್ಲೇ ಇರುವಂತೆ ಆತನಿಗೆ ತಾಕೀತು ಮಾಡಿದರು.

‘ಯುವಕನ ವೈದ್ಯಕೀಯ ವರದಿಯಲ್ಲಿ ಕೊರೊನಾ ವೈರಸ್ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಊಹಾಪೋಹದ ಸುದ್ದಿಗಳಿಗೆ ಕಿವಿಗೊಡಬಾರದು’ ಎಂದು ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)