ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ರೆಗಳ ವೈಭವ ಕಸಿದ ಕೊರೊನಾ

ಎಂದಿನಂತೆ ನಡೆದ ಕಾರವಾರದ ಸಂತೆ: ಉತ್ಸವಗಳ ಸರಳ ಆಚರಣೆ
Last Updated 15 ಮಾರ್ಚ್ 2020, 12:56 IST
ಅಕ್ಷರ ಗಾತ್ರ

ಕಾರವಾರ: ಕೊರೊನಾ ವೈರಸ್ ಹರಡುವ ಸಾಧ್ಯತೆಗಳ ಕಾರಣದಿಂದ ವಿವಿಧ ಜಾತ್ರೆ, ಸಮಾರಂಭಗಳನ್ನು ಭಾನುವಾರವೂ ಅತ್ಯಂತ ಸರಳವಾಗಿ ಆಚರಿಸಲಾಯಿತು.ನಗರದ ಸಂತೆಯಲ್ಲಿ ಮಾತ್ರ ಎಂದಿನಂತೆ ವ್ಯವಹಾರ ನಡೆಯಿತು.

ಸಾರ್ವಜನಿಕ ಸಭೆ, ಸಮಾರಂಭಗಳಿಗೆ ರಾಜ್ಯ ಸರ್ಕಾರ ನಿರ್ಬಂಧ ಹೇರಿರುವ ಕಾರಣ, ನಗರದಕೋಡಿಬಾಗದಲ್ಲಿ ಖಾಪ್ರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಸರಳವಾಗಿನೆರವೇರಿತು. ದೇವಸ್ಥಾನದಲ್ಲಿಈ ಬಾರಿ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿತ್ತು. ದೇವರಿಗೆ ವಾಡಿಕೆಯ ಪೂಜೆಗಳನ್ನು ಮಾತ್ರ ಮಾಡಿ ಜಾತ್ರೆ ಹಮ್ಮಿಕೊಳ್ಳಲಾಯಿತು.

ಇಲ್ಲಿ ದೇವರಿಗೆ ಹಣ್ಣು, ಕಾಯಿ, ಹೂವಿನ ಜತೆಗೆ ಮದ್ಯದ ಬಾಟಲಿ ಹಾಗೂ ಸಿಗರೇಟನ್ನು ನೈವೇದ್ಯವಾಗಿಅರ್ಪಿಸುತ್ತಾರೆ. ಅರ್ಚಕರು ಅವುಗಳನ್ನು ಸ್ವೀಕರಿಸಿ, ಮರೆಯಲ್ಲಿರುವದೇವರ ಚಿಕ್ಕ ಮೂರ್ತಿಗೆ ಮದ್ಯವನ್ನು ಅಭಿಷೇಕ ಮಾಡುವವಿಶಿಷ್ಟ ಆಚರಣೆಮೊದಲಿನಿಂದಲೂ ನಡೆದುಬಂದಿದೆ.

ಸಂತೆ ಮಾರುಕಟ್ಟೆ:ಕಾರವಾರದಲ್ಲಿ ಭಾನುವಾರ ವಾರದ ಸಂತೆ ಮಾರುಕಟ್ಟೆ ಎಂದಿನಂತೆ ತೆರೆದಿತ್ತು. ಸಂಜೆ 6ರವರೆಗೆ ಮಾತ್ರ ಸಂತೆ ನಡೆಸಲು ನಗರಸಭೆ ಅವಕಾಶ ನೀಡಿತ್ತು. ರಾಜ್ಯ ಸರ್ಕಾರದ ನಿರ್ಬಂಧದ ಪ್ರಭಾವದಿಂದ ತರಕಾರಿಗಳದರವೂ ಗಮನಾರ್ಹವಾಗಿ ಏರಿಕೆ ಕಂಡಿರಲಿಲ್ಲ.ಸಾವಿರಾರು ಗ್ರಾಹಕರೂ ಬಂದು ತರಕಾರಿ, ಹಣ್ಣು ಹಂಪಲು ಖರೀದಿಸಿದರು. ಬೆರಳೆಣಿಕೆಯಷ್ಟು ಜನರು ಮಾತ್ರ ಮುಖಗವಸು ಧರಿಸಿ ಬಂದಿದ್ದು ಕಂಡುಬಂತು.

ನಾಗರಿಕರಿಗೆ ಕೊರೊನಾ ವೈರಸ್‌ ಸೋಂಕಿನ ಬಗ್ಗೆ ಅರಿವು ಮೂಡಿಸಲು ನಗರಸಭೆಯ ವಾಹನವೊಂದು ಸಂತೆ ಮಾರುಕಟ್ಟೆಯಲ್ಲಿ ಸಂಚರಿಸುತ್ತಿತ್ತು.ಆರೋಗ್ಯ ಕಾ‍ಪಾಡಿಕೊಳ್ಳಲು ಅಗತ್ಯವಿರುವ ಸಂದೇಶಗಳು, ಸಲಹೆಗಳನ್ನು ವಾಹನದಲ್ಲಿದ್ದ ಧ್ವನಿವರ್ಧಕದಲ್ಲಿ ಪ್ರಕಟಿಸಲಾಗುತ್ತಿತ್ತು.

ಕಾರ್ಯಕ್ರಮಗಳು ರದ್ದು:ಕಾರವಾರದ ಹಬ್ಬುವಾಡದ ಗುತ್ತಿಂಬೀರ ದೇಗುಲದಲ್ಲಿ ವಾರ್ಷಿಕ ಉತ್ಸವಗಳು ಮಾರ್ಚ್ 16ರಂದು ನಡೆಯಲಿವೆ. ಸರ್ಕಾರದ ನಿರ್ಬಂಧದ ಕಾರಣ ಜಾತ್ರೆಯನ್ನು ಸರಳವಾಗಿ ಆಚರಿಸಲು ದೇವಸ್ಥಾನ ಸಮಿತಿ ನಿರ್ಧರಿಸಿದೆ. ಈ ಬಾರಿಧಾರ್ಮಿಕ ಕಾರ್ಯಕ್ರಮಗಳನ್ನು ಮಾತ್ರ ಮಾಡಲಾಗುವುದು. ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ನಾಟಕ ಪ್ರದರ್ಶನಗಳು ಇರುವುದಿಲ್ಲ.

ಬಂಗಾರಮಕ್ಕಿ:ಹೊನ್ನಾವರ ತಾಲ್ಲೂಕಿನ ಬಂಗಾರಮಕ್ಕಿವಿಶ್ವವೀರಾಂಜನೇಯ ಮಹಾಸಂಸ್ಥಾನದಲ್ಲಿ ಏ.2ರಿಂದ 8ರವರೆಗೆ ನಿಗದಿಯಾಗಿದ್ದ ಶ್ರೀರಾಮನವಮಿ, ಶರಾವತಿ ಕುಂಭ, ಸಂಸ್ಕೃತಿಕುಂಭ, ಮಲೆನಾಡ ಉತ್ಸವ, ಶ್ರೀನಿವಾಸ ಕಲ್ಯಾಣ್ಯೋತ್ಸವವನ್ನು ರದ್ದು ಮಾಡಲಾಗಿದೆ.

ಕೇವಲ ರಥೋತ್ಸವ ಕಾರ್ಯಕ್ರಮವನ್ನು ಅತಿ ಸರಳವಾಗಿ, ಶಾಸ್ತ್ರೋಕ್ತವಾಗಿ ನಡೆಸಲು ತೀರ್ಮಾನಿಸಿದ್ದಾಗಿ ದೇವಸ್ಥಾನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT