ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾದಲ್ಲಿ ಯುವಕನಿಗೆ ಕೋವಿಡ್ ದೃಢ: ಭಟ್ಕಳದಲ್ಲಿ ಮಗುವಿಗೂ ಸೋಂಕು

Last Updated 13 ಮೇ 2020, 7:14 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಬುಧವಾರ ಕೋವಿಡ್ 19ನ ಎರಡು ಪ್ರಕರಣಗಳು ದೃಢಪಟ್ಟಿವೆ. ಕುಮಟಾ ತಾಲ್ಲೂಕಿನ 26 ವರ್ಷದ ಯುವಕನಿಗೆ (ರೋಗಿ ಸಂಖ್ಯೆ 946) ಸೋಂಕು ತಗುಲಿದ್ದು, ಭಟ್ಕಳ ತಾಲ್ಲೂಕಿನ ಹೊರತಾಗಿ ಖಚಿತವಾದ ಮೊದಲ ಪ್ರಕರಣ ಇದಾಗಿದೆ.

ಭಟ್ಕಳದ ಎರಡು ವರ್ಷದ ಹೆಣ್ಣುಮಗುವಿಗೂ (ರೋಗಿ ಸಂಖ್ಯೆ 929) ಕೋವಿಡ್ ದೃಢಪಟ್ಟಿದೆ. ಆಕೆ 786ನೇ ಸಂಖ್ಯೆಯ ಸೋಂಕಿತೆಯಸಂಪರ್ಕಕ್ಕೆ ಬಂದಿದ್ದಳು. ಆ ರೋಗಿಯು 18 ವರ್ಷದ ಯುವತಿಯ (ರೋಗಿ ಸಂಖ್ಯೆ 569) ದ್ವಿತೀಯ ಸಂಪರ್ಕವಾಗಿದ್ದರು.

ಕುಮಟಾದ ವನ್ನಳ್ಳಿಯ ಯುವಕ ಮಹಾರಾಷ್ಟ್ರದ ರತ್ನಗಿರಿಯಿಂದ ಕೆಲವು ದಿನಗಳ ಹಿಂದೆ ವಾಪಸಾಗಿದ್ದರು. ಲಾರಿಯೊಂದರಲ್ಲಿ ಬಂದಿದ್ದ ಅವರ ಬಗ್ಗೆ ಊರಿನ ಜನರೇ ಪೊಲೀಸರಿಗೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕಯುವಕನನ್ನು ಕ್ವಾರಂಟೈನ್ ಮಾಡಲಾಗಿತ್ತು. ಅವರ ಜೊತೆ ಯಾರ್ಯಾರು ಸಂಪರ್ಕಕ್ಕೆ ಬಂದಿದ್ದಾರೆ ಎನ್ನುವ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಜಿಲ್ಲೆಯಲ್ಲಿ ಈಗ ಒಟ್ಟು 30 ಸಕ್ರಿಯ ಪ್ರಕರಣಗಳಿದ್ದು, 28 ಜನರು ಈಗಾಗಲೇ ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ತೆರೆಯಲಾಗಿರುವ ಕೋವಿಡ್ 19 ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರ ಆರೋಗ್ಯವೂ ಸುಧಾರಿಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT