ರಂಗಾಪುರ ಕೆರೆ ಬಂದಿದ್ದ ಮೊಸಳೆ ಸೆರೆ

7
ಗ್ರಾಮಸ್ಥರ ಆತಂಕ ನಿವಾರಣೆ

ರಂಗಾಪುರ ಕೆರೆ ಬಂದಿದ್ದ ಮೊಸಳೆ ಸೆರೆ

Published:
Updated:
Deccan Herald

ಶಿರಸಿ: ತಾಲ್ಲೂಕಿನ ರಂಗಾಪುರ ಕೆರೆಯಲ್ಲಿ ಒಂದು ವಾರದಿಂದ ಆಗಾಗ ಕಾಣಿಸಿಕೊಂಡು ಮಾಯವಾಗುತ್ತಿದ್ದ, ಮೊಸಳೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಬನವಾಸಿ ವಲಯದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಕಳೆದ ಶುಕ್ರವಾರ ಮೊದಲ ಬಾರಿಗೆ ಕೆರೆಯಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಇದನ್ನು ಕಂಡು ಆತಂಕಗೊಂಡಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ನಿರಂತರ ನಿಗಾವಹಿಸಿದ ಇಲಾಖೆ ಸಿಬ್ಬಂದಿ, ಕೆರೆ ಕಡೆಗೆ ಹೋಗದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದ ಜೊತೆಗೆ ಕಾವಲುಗಾರರನ್ನು ಇಟ್ಟು ಕಾದಿದ್ದರು. ಬಲೆ ಹಾಕಿಟ್ಟು ಮೊಸಳೆಯನ್ನು ಸುರಕ್ಷಿತವಾಗಿ ಹಿಡಿಯುವ ಕಾರ್ಯಾಚರಣೆ ಮುಂದುವರಿದಿತ್ತು.

ಶುಕ್ರವಾರ ಬೆಳಿಗ್ಗೆ ಮೊಸಳೆ ಸೆರೆಯಾಗಿದೆ. ‘ಮೊಸಳೆ 8.5 ಅಡಿ ಉದ್ದವಿದೆ. ಇದನ್ನು ಮೊಸಳೆಗಳ ನೆಲೆ ಇರುವ ಪ್ರದೇಶದಲ್ಲಿ ಬಿಡಲಾಗುತ್ತದೆ’ ಎಂದು ಬನವಾಸಿ ಆರ್‌ಎಫ್‌ಒ ವಿನಯ ಭಟ್ ತಿಳಿಸಿದ್ದಾರೆ. ಡಿಸಿಎಫ್ ಎನ್.ಡಿ.ಸುದರ್ಶನ, ಎಸಿಎಫ್ ರಘು ಮಾರ್ಗದರ್ಶನದಲ್ಲಿ, ಪ್ರಾಣಿ ತಜ್ಞ ಡಾ.ರಾಜೇಂದ್ರ ಅವರ ನೆರವು ಪಡೆದು ಇಲಾಖೆ ಸಿಬ್ಬಂದಿ ಮೊಸಳೆಯನ್ನು ಸೆರೆ ಹಿಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !