ಶನಿವಾರ, ಅಕ್ಟೋಬರ್ 1, 2022
20 °C

ದಾಂಡೇಲಿ: ನದಿ ಪಕ್ಕ ನಡೆದುಕೊಂಡು ಹೋಗುತ್ತಿದ್ದವ ಮೊಸಳೆ ಬಾಯೊಳಗೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾಂಡೇಲಿ: ನಗರದ ಅಲೈಡ್ ಏರಿಯಾ ಹತ್ತಿರ ಶನಿವಾರ ಸಂಜೆ ವಿರ್ನೋಲಿ ನದಿ ಪಕ್ಕ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಮೊಸಳೆಯು ನೀರಿಗೆ ಎಳೆದುಕೊಂಡಿದೆ. ಅವರಿಗಾಗಿ ನದಿಯಲ್ಲಿ, ದೋಣಿ ಮತ್ತು ಡ್ರೋನ್ ಕ್ಯಾಮೆರಾ ಬಳಸಿ ಶೋಧ ಕಾರ್ಯ ಮಾಡಲಾಗುತ್ತಿದೆ.

ಸುರೇಶ್ ವಸಂತ ತೇಲಿ (44) ಮೊಸಳೆ ದಾಳಿಗೊಳಗಾದವರು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನಾ ಸ್ಥಳದಲ್ಲಿ ಪೌರಾಯುಕ್ತ ರಾಜಾರಾಮ ಪವಾರ, ನಗರಸಭೆ ಅಧ್ಯಕ್ಷೆ ಸರಸ್ವತಿ ರಜಪೂತ, ಡಿ.ವೈ.ಎಸ್ಪಿ ಕೆ.ಎಲ್.ಗಣೇಶ, ಸಿ.ಪಿ.ಐ ಬಿ.ಎಸ್.ಲೋಕಾಪುರ, ವಾರ್ಡ್ ಸದಸ್ಯೆ ಪ್ರೀತಿ ನಾಯರ್, ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಕಿರಣ ಪಾಟೀಲ, ಅಪರಾಧ ವಿಭಾಗದ ಪಿ.ಎಸ್.ಐ ಯಲ್ಲಪ್ಪ.ಎಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹಾಜರಿದ್ದು ಶೋಧ ಕಾರ್ಯ ನಡೆಸಿದ್ದಾರೆ.

ವಿನ್ರೋಲಿ ಆರ್.ಎಫ್.ಒ ಸಂಗಮೇಶ ಪಾಟೀಲ, ಟಿಂಬರ್ ಡಿಪೊ ಆರ್.ಎಫ್.ಒ ಬಸವರಾಜ.ಎಂ, ಉಪ ವಲಯ ಎ.ಸಿ.ಎಫ್ ಎಸ್.ನಿಂಗಾಣಿ ಅವರೂ ಸ್ಥಳದಲ್ಲಿದ್ದು, ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಂಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು