ಶುಕ್ರವಾರ, ಜನವರಿ 17, 2020
22 °C
ಗಾಡೆನ್ ಲಾಚಿ ಮಂದಿರಕ್ಕೆ ದಲೈಲಾಮಾ ಭೇಟಿ ಇಂದು

ಆರ್ಯದೇವನ ಕೊಡುಗೆ ಅಪಾರ: ಧರ್ಮಗುರು ದಲೈಲಾಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ‘ಬೌದ್ಧ ಗ್ರಂಥಗಳ ಲೇಖಕ ಹಾಗೂ ಕನದೇವ ಎಂದೂ ಕರೆಯುವ ಆರ್ಯದೇವರು, ಬೌದ್ಧ ಧರ್ಮದ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿದ್ದಾರೆ’ ಎಂದು ಟಿಬೆಟನ್ ಧರ್ಮಗುರು ದಲೈಲಾಮಾ ಹೇಳಿದರು.

ತಾಲ್ಲೂಕಿನ ಟಿಬೆಟನ್‌ ಕ್ಯಾಂಪ್‌ ನಂ.6ರ ಡ್ರೆಪುಂಗ್ ಲೋಸಲಿಂಗ್‌ ಅಸೆಂಬ್ಲಿ ಹಾಲ್‌ನಲ್ಲಿ ಮಂಗಳವಾರ ನಡೆದ, ಆರ್ಯದೇವರ, ‘ಮಧ್ಯದ ದಾರಿಯಲ್ಲಿ 400 ಚರಣಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ವಿದ್ವಾಂಸ ಬಿಕ್ಕುಗಳು ಆರ್ಯದೇವರ ಕುರಿತು ಪ್ರಸ್ತುತಪಡಿಸಿದರು. ಅಧ್ಯಯನನಿರತ ಕೆಲವು ಬಿಕ್ಕುಗಳು ಸಹ ತಾವು ಕಲಿತಿರುವುದನ್ನು ಬೌದ್ಧ ಗುರುವಿನ ಮುಂದೆ ಮಂಡಿಸಿದರು.

ದಲೈಲಾಮಾ ಬುಧವಾರ ಮಧ್ಯಾಹ್ನ ಕ್ಯಾಂಪ್‌ ನಂ.1ರಲ್ಲಿರುವ ಗಾಡೆನ್ ಲಾಚಿ ಬೌದ್ಧ ಮಂದಿರಕ್ಕೆ ಆಗಮಿಸಲಿದ್ದಾರೆ. ಅಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಗುತ್ತದೆ. ನಂತರ ಗಾಡೆನ್‌ ಶಾರ್ಟ್ಸೆ ಬೌದ್ಧ ಮಂದಿರದಲ್ಲಿ ಮೂರು ದಿನಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ.

ಪ್ರತಿಕ್ರಿಯಿಸಿ (+)