ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ವರ್ಗಾವಣೆ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ನೂತನ ಜಿಲ್ಲಾಧಿಕಾರಿಯಾಗಿ ಡಾ.ಕೆ.ಹರೀಶ್ ಕುಮಾರ್ ನೇಮಿಸಿ ಸರ್ಕಾರದ ಆದೇಶ

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ವರ್ಗಾವಣೆ

Published:
Updated:
Prajavani

ಕಾರವಾರ: ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರನ್ನು ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ. ಅವರ ಹುದ್ದೆಗೆ ಚಾಮರಾಜನಗರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರನ್ನು ನೇಮಿಸಲಾಗಿದೆ.

ಹೆಚ್ಚುವರಿ ಜಿಲ್ಲಾಧಿಕಾರಿಯನ್ನಾಗಿ ಎಸ್.ನವೀನ್ ಕುಮಾರ್ ರಾಜು ಅಧಿಕಾರ ಸ್ವೀಕರಿಸಲಿದ್ದಾರೆ. ಅವರು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದರು. ಇದೇವೇಳೆ, ಶಿರಸಿಯ ಉಪ ವಿಭಾಗಾಧಿಕಾರಿಯನ್ನಾಗಿ ಈಶ್ವರ ಉಳ್ಳಾಗಡ್ಡಿ ಅವರನ್ನು ನೇಮಮ ಮಾಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.

ಜಿಲ್ಲೆಯಲ್ಲಿ ಸುಮಾರು ಎರಡು ವರ್ಷ ಕಾರ್ಯ ನಿರ್ವಹಿಸಿದ ಅನುಭವವನ್ನು ‘ಪ್ರಜಾವಾಣಿ’ ಜತೆ ಗುರುವಾರ ಅವರು ಹಂಚಿಕೊಂಡರು. 

ಅವಿಸ್ಮರಣೀಯ: ‘ನಾನು ಇಲ್ಲಿ ಇದ್ದಷ್ಟು ದಿನವೂ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಜನರಿಂದ, ಅಧಿಕಾರಿಗಳಿಂದ, ಮಾಧ್ಯಮದಿಂದ ಉತ್ತಮ ಪ್ರತಿಕ್ರಿಯೆ, ಸಹಕಾರ ಸಿಕ್ಕಿದೆ. ಚುನಾವಣೆಗೆ ಸಂಬಂಧಿಸಿದ ಕಾರ್ಯಕ್ರಮಗಳು, ವಿಶೇಷ ಪಿಂಚಣಿ ಅದಾಲತ್, ಹಾಸ್ಟೆಲ್, ಶಾಲೆಗಳಿಗೆ ಭೂಮಿ ಮಂಜೂರು, ಹಾಸ್ಟೆಲ್‌, ಅಂಗನವಾಡಿಗಳ ಸುಧಾರಣೆಗೆ ಕ್ರಮ, ಪ್ರವಾಸೋದ್ಯಮ ಅಭಿವೃದ್ಧಿಗೆ ಹಮ್ಮಿಕೊಂಡ ಕಾರ್ಯಕ್ರಮಗಳು ಸ್ಮರಣೀಯವಾಗಿವೆ’ ಎಂದು ತಿಳಿಸಿದರು.

ಕೆಲವನ್ನು ಸಾಧಿಸಲಾಗಲಿಲ್ಲ: ‘ನಾನು ಅಂದುಕೊಂಡ ಹಲವು ಸಂಗತಿಗಳು ಸಾಧನೆಯ ಹಂತದಲ್ಲಿವೆ. ಕೆಲವನ್ನು ಹಲವು ತಾಂತ್ರಿಕ ಕಾರಣಗಳಿಂದ ಆರಂಭಿಸಲು ಸಾಧ್ಯವಾಗಲಿಲ್ಲ. ಪ್ರವಾಸೋದ್ಯಮ ಚಟುವಟಿಕೆಗಳ ಅಭಿವೃದ್ಧಿಗೆ ಹಮ್ಮಿಕೊಂಡ ಕಾರ್ಯಕ್ರಮಗಳು ಕ್ರಮೇಣ ಫಲ ನೀಡಲು ಆರಂಭಿಸಿವೆ. ಘಟ್ಟದ ಮೇಲಿನ ತಾಲ್ಲೂಕುಗಳಲ್ಲೂ ಇಂತಹ ಪ್ರಯತ್ನಗಳನ್ನು ಮಾಡಲು ಉದ್ದೇಶಿಸಿದ್ದೆವು. ಅದನ್ನು ಆರಂಭಿಸಲಾಗಲಿಲ್ಲ’ ಎಂದು ಹೇಳಿದರು.

ಕೂರ್ಮಗಡ ದುರಂತವೊಂದೇ ಕಹಿ: ಕೂರ್ಮಗಡದ ದೋಣಿ ದುರಂತವೊಂದನ್ನು ಬಿಟ್ಟು ಎಲ್ಲವೂ ಚೆನ್ನಾಗಿತ್ತು. ಚತುಷ್ಪಥ ಹೆದ್ದಾರಿಗೆ ವೇಗ, ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವುದು ತೃಪ್ತಿ ತಂದಿದೆ. ಮಾರ್ಚ್ ತಿಂಗಳಲ್ಲಿ ಮತ್ತೊಮ್ಮೆ ಸಭೆ ಸೇರಿ ಏನೇನು ಸುರಕ್ಷತಾ ಕ್ರಮಗಳನ್ನು ಅನುಸರಿಬೇಕು ಎಂದು ಚರ್ಚಿಸಬೇಕು. ಹೊಸ ಜಿಲ್ಲಾಧಿಕಾರಿಗೂ ಈ ಮಾಹಿತಿ ನೀಡುತ್ತೇನೆ. ಏಪ್ರಿಲ್, ಮೇನಲ್ಲಿ ಅಪಾಯ ಆಗಬಹುದಾದ ಜಾಗವನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಜೂನ್‌ ವೇಳೆಗೆ ಕ್ರಮ ಕೈಗೊಳ್ಳಬಹುದಾಗಿದೆ’ ಎಂದು ವಿವರಿಸಿದರು.

‘ಪ್ರಯತ್ನಗಳಿಗೆ ಫಲ ಸಿಕ್ಕಿದೆ’: ಕಂದಾಯ ಇಲಾಖೆಯಲ್ಲಿ ನಾಡಕಚೇರಿ, ಇ–ಕ್ಷಣ, ಭೂಮಿ ತಂತ್ರಾಂಶಗಳ ಬಳಕೆಯಲ್ಲಿ ಜಿಲ್ಲೆಯು ಟಾಪ್ 3ನಲ್ಲಿದೆ. ನಿರಂತರ ಪ್ರಯತ್ನಗಳಿಂದ ಈ ಫಲಿತಾಂಶ ಸಿಕ್ಕಿದೆ ಎಂದು ನಕುಲ್ ಹೇಳಿದರು.

ಜಿಲ್ಲಾಧಿಕಾರಿಯಾಗಿ ಪಡೆದ ಅನುಭವಗಳು ಬೆಂಗಳೂರಿನಲ್ಲಿ ನಿರ್ದೇಶಕರ ಮಟ್ಟದ ಜವಾಬ್ದಾರಿಗಳನ್ನು ನಿಭಾಯಿಸಲು ಸಹಾಯಕ್ಕೆ ಬರುತ್ತವೆ. ಇವು ಐ.ಟಿ–ಬಿ.ಟಿ ಕ್ಷೇತ್ರದ ಹೊಸ ಯೋಜನೆಗಳನ್ನು ಜಾರಿ ಮಾಡಲು ಅನುಕೂಲವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !