ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇದಿನಿಗೆ ರಸ್ತೆ: ಅಂದಾಜು ಯೋಜನೆ ತಯಾರಿಸಲು ಸೂಚನೆ

ಕುಮಟಾ: ಕುಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಮತ್ತು ತಂಡ
Last Updated 21 ಜೂನ್ 2019, 13:45 IST
ಅಕ್ಷರ ಗಾತ್ರ

ಕುಮಟಾ (ಉತ್ತರ ಕನ್ನಡ): ತಾಲ್ಲೂಕಿನ ಅತ್ಯಂತ ಕುಗ್ರಾಮ ಮೇದಿನಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಹಾಗೂ ಜಿಲ್ಲಾಡಳಿತದ ಹಲವು ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ, ಸ್ಥಳೀಯರ ಬವಣೆಯನ್ನು ಕಂಡರು.

ಮಳೆಗಾಲದಲ್ಲಿ ಪಡಿತರ ಸಾಮಗ್ರಿಯನ್ನು ಮೇದಿನಿ ಗ್ರಾಮಕ್ಕೇ ತರಿಸಿ ಕೊಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು. ಅಲ್ಲದೇ ಗ್ರಾಮದಲ್ಲಿ ಸುಮಾರುಎಂಟುಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ ಅಂದಾಜು ವೆಚ್ಚದ ಯೋಜನೆ ತಯಾರಿಸುವಂತೆಅವರು ಅರಣ್ಯ ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಇದೇವೇಳೆ ಪ್ರತಿಕ್ರಿಯಿಸಿದಅರಣ್ಯ ಇಲಾಖೆ ಅಧಿಕಾರಿಗಳು, ‘ಮೇದಿನಿ ಸುತ್ತಮುತ್ತಲಿನ ಪ್ರದೇಶಗಳು ಅಪರೂಪದ ‘ಸಿಂಗಳೀಕಸಂರಕ್ಷಿತ ಪ್ರದೇಶ’ದಲ್ಲಿವೆ.ಹಾಗಾಗಿ ಇಲ್ಲಿ ರಸ್ತೆ ನಿರ್ಮಾಣಕ್ಕೆ ಇಲಾಖೆಯ ಅನುಮತಿ ಅಗತ್ಯ’ ಎಂದು ಪ್ರತಿಪಾದಿಸಿದರು.

ಗ್ರಾಮಸ್ಥರ ಅಹವಾಲನ್ನು ಕೇಳಿದ ಹರೀಶಕುಮಾರ್,ಯಾವುದೇ ಮರಗಳನ್ನುಕಡಿಯದೇಪ್ರಸ್ತುತಇರುವ ದಾರಿಯಲ್ಲೇಗುಣಮಟ್ಟದ ರಸ್ತೆಯನ್ನು ಶೀಘ್ರವೇ ನಿರ್ಮಿಸಲು ಕ್ರಮ ವಹಿಸುವಂತೆಅಧಿಕಾರಿಗಳಿಗೆಸೂಚಿಸಿದರು. ಅಲ್ಲದೇ ಗ್ರಾಮದ ಬಗ್ಗೆ ಮುಖ್ಯಮಂತ್ರಿಗೂ ಶೀಘ್ರವೇ ವರದಿ ಸಲ್ಲಿಸುವುದಾಗಿ ಹೇಳಿದರು.

ಕುಮಟಾದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿ ಮೇದಿನಿಯಿದ್ದು, ಸೊಪ್ಪಿನ ಹೊಸಳ್ಳಿ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿದೆ.ಎಂಟು ಕಿಲೋಮೀಟರ್ ಕಡಿದಾದ ಬೆಟ್ಟದಲ್ಲಿ ಹಾದು ಹೋಗಿರುವ ಕಚ್ಚಾ ರಸ್ತೆಯೇ ಇಲ್ಲಿ ಸಂಪರ್ಕ ಕೊಂಡಿಯಾಗಿದೆ. ಇದರಿಂದ ಈ ಗ್ರಾಮಮೂಲ ಸೌಕರ್ಯದಿಂದ ವಂಚಿತವಾಗಿದೆ. ಇಲ್ಲಿನ ಯುವಕರ ಜೊತೆ ವೈವಾಹಿಕ ಸಂಬಂಧ ಬೆಳೆಸಲು ಯುವತಿಯರು ಒಪ್ಪುತ್ತಿಲ್ಲ.

ಈಗ್ರಾಮದ ಸಮಸ್ಯೆಯ ಬಗ್ಗೆ ‘ಕಂಕಣ ಭಾಗ್ಯಕ್ಕೆ ಮುಳುವಾದ ರಸ್ತೆ!’ ಎಂಬ ಶೀರ್ಷಿಕೆಯ ವರದಿಯು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿತ್ತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲಾಧಿಕಾರಿಗೆ ಖುದ್ದು ಕರೆಮಾಡಿ ಗ್ರಾಮಕ್ಕೆ ಭೇಟಿ ನೀಡಿ ವರದಿ ಸಲ್ಲಿಸಲೂಸೂಚಿಸಿದ್ದರು.

ಗ್ರಾಮಕ್ಕೆ ಜಿಲ್ಲಾಧಿಕಾರಿ ಜೊತೆಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮದ್ ರೋಶನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ, ತಹಶೀಲ್ದಾರ್ ಮೇಘರಾಜ ನಾಯ್ಕ, ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್ ಆರ್.ಜಿ.ಗುನಗಿ ಕೂಡ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT