ಭಾನುವಾರ, ಸೆಪ್ಟೆಂಬರ್ 15, 2019
26 °C

ರಾಮಚಂದ್ರ ಶೇಟ್ ನಿಧನ

Published:
Updated:
Prajavani

ಶಿರಸಿ: ದ್ವಿಭಾಷಾ ಸಾಹಿತಿ, ನಾಟಕಕಾರ ರಾಮಚಂದ್ರ ಮಹಾಬಲೇಶ್ವರ ಶೇಟ್ (75) ಶನಿವಾರ ನಿಧನರಾದರು.

ಅವರಿಗೆ ಪತ್ನಿ, ಮೂವರು ಪುತ್ರರು ಇದ್ದಾರೆ. ಆರ್ಯಂ ಎಂಬ ಕಾವ್ಯನಾಮದಲ್ಲಿ ಕನ್ನಡ, ಕೊಂಕಣಿಯಲ್ಲಿ ಬರೆಯುತ್ತಿದ್ದ ಅವರು 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಶಿಕ್ಷಕರಾಗಿ ನಿವೃತ್ತರಾಗಿದ್ದ ಅವರು, ಆರ್ಯ ಪ್ರಕಾಶನದ ಮೂಲಕ ಅನೇಕ ಪುಸ್ತಕಗಳನ್ನು ಹೊರತಂದಿದ್ದರು.

ಅಂಕೋಲಾ ಕೊಂಕಣಿ ಭಾಷಾ ಸಂಘದ ಉಪಾಧ್ಯಕ್ಷರಾಗಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು.

Post Comments (+)