ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಂಕಾರಿಕ ಮೀನು ಸಾಕಣೆಗೆ ‘ಆತ್ಮಾ’ ಬಲ!

ತಮಿಳುನಾಡಿನ ಕೊಳತ್ತೂರಿನಲ್ಲಿ ಅಧ್ಯಯನ ನಡೆಸಿದ ಜಿಲ್ಲೆಯ 16 ರೈತರು
Last Updated 22 ಮೇ 2019, 19:48 IST
ಅಕ್ಷರ ಗಾತ್ರ

ಕಾರವಾರ:ಜಿಲ್ಲೆಯ ಆಸಕ್ತ ರೈತರಿಗೆ ಆಲಂಕಾರಿಕ ಮೀನುಗಳನ್ನುಸಾಕಣೆ ಮಾಡಲು ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆಯು (ಆತ್ಮಾ) ಯೋಜನೆ ಸಿದ್ಧಪಡಿಸಿದೆ. ಇದರ ಅಂಗವಾಗಿಜಿಲ್ಲೆಯ 16 ರೈತರ ತಂಡವೊಂದು ಕಳೆದ ತಿಂಗಳು ತಮಿಳುನಾಡಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ.

ತಂಡದಲ್ಲಿ ಸಿದ್ದಾಪುರ ತಾಲ್ಲೂಕಿನ 11, ಯಲ್ಲಾಪುರದ ಮೂವರು, ಕುಮಟಾ ಹಾಗೂ ಹೊನ್ನಾವರ ತಾಲೂಕಿನ ತಲಾ ಒಬ್ಬ ರೈತರಿದ್ದರು. ಜಿಲ್ಲೆಯಲ್ಲಿಯೂ ಈ ಕೃಷಿಯನ್ನುಆರ್ಥಿಕ ಲಾಭದ ದೃಷ್ಟಿಯಿಂದಪ್ರಾರಂಭಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿಮುಖ್ಯ ಕಾರ್ಯ ನಿರ್ವಹಣಾಧಿಕಾರಿಎಂ.ರೋಶನ್ ತಿಳಿಸಿದ್ದಾರೆ.

ತಮಿಳುನಾಡಿನ ಕೊಳತ್ತೂರಿನಲ್ಲಿನೂರಾರು ಮಂದಿ ಆಲಂಕಾರಿಕ ಮೀನಿನ ಸಾಕಣೆ ಮಾಡುತ್ತಿದ್ದಾರೆ. ಅದರಿಂದ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಮೀನಿನ ಮರಿಗಳನ್ನು ತಂದು ಅಕ್ವೇರಿಯಂ ಮಾಡುವುದು ಅಥವಾ ಮೀನಿನ ಲೆಕ್ಕದಲ್ಲಿ ಮಾರಾಟ ಮಾಡುವುದುಈ ಯೋಜನೆಯ ಉದ್ದೇಶವಾಗಿದೆ. ಇದಕ್ಕಾಗಿ ನಗರದ ‘ನೆಲಸಿರಿ’ ಕಟ್ಟಡ ಮೇಲಿನ ಅಂತಸ್ತಿನಲ್ಲಿ ಜಾಗ ಅಂತಿಮವಾಗುವ ಸಾಧ್ಯತೆಯಿದೆ.

‘ಜಿಲ್ಲೆಯ ಆಸಕ್ತ ರೈತರಿಗೆ ಜಲ ಕೃಷಿಯ ಬಗ್ಗೆಮೊದಲು ಬೆಂಗಳೂರಿನ ಹೆಬ್ಬಾಳದಲ್ಲಿಒಂದು ದಿನದತರಬೇತಿ ನೀಡಲಾಯಿತು. ನಂತರ ಅವರನ್ನು ಕೊಳತ್ತೂರಿಗೆ ಕರೆದುಕೊಂಡು ಹೋಗಲಾಯಿತು.ಅಲ್ಲಿ ಪ್ರಾಯೋಗಿಕವಾಗಿ ಮೀನು ಕೃಷಿಕರಿಂದಲೇ ಮಾಹಿತಿ ಪಡೆದುವಾಪಸಾಗಿದ್ದಾರೆ’ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟರಮಣ ಹೆಗಡೆ ತಿಳಿಸಿದ್ದಾರೆ.

ಕನಿಷ್ಠ ₹ 1.5 ಲಕ್ಷ ಖರ್ಚು:ಆಲಂಕಾರಿಕ ಮೀನು ಸಾಕಣೆಯ ಒಂದು ಘಟಕ ನಿರ್ಮಾಣಕ್ಕೆ ಕನಿಷ್ಠ ₹ 1.5 ಲಕ್ಷ ಬೇಕಾಗುತ್ತದೆ. ಈ ಯೋಜನೆಗೆ ರೈತರು ಆಸಕ್ತಿ ವಹಿಸಿದರೆ ಮೀನುಗಾರಿಕೆ ಇಲಾಖೆಯಿಂದಲೂ ಸಹಾಯಧನ ಕೊಡಿಸಲು ಪ್ರಯತ್ನಿಸಬಹುದು. ಆದರೆ, ಮಾರುಕಟ್ಟೆ ಕಂಡುಕೊಳ್ಳುವುದು ಇದರಲ್ಲಿ ಅತಿ ಮುಖ್ಯವಾಗಿದೆ ಎಂದುಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕವೆಂಕಟರಮಣ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT