ಶನಿವಾರ, ಅಕ್ಟೋಬರ್ 1, 2022
20 °C

ಜಿಂಕೆ ಹತ್ಯೆ:ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ತಾಲ್ಲೂಕಿನ ಕಾನಕೊಪ್ಪ ಗ್ರಾಮದ ಅರಣ್ಯದಲ್ಲಿ ಜಿಂಕೆ ಹತ್ಯೆ ಮಾಡಿದ ಆರೋಪದಡಿ ಇಬ್ಬರನ್ನು ಬನವಾಸಿ ವಲಯ ಅರಣ್ಯ ಅಧಿಕಾರಿಗಳು ಗುರುವಾರ ಬಂಧಿಸಿದ್ದು, ಜಿಂಕೆ ಮಾಂಸ ವಶಕ್ಕೆ ಪಡೆದಿದ್ದಾರೆ.

ಕಾನಕೊಪ್ಪ ಗ್ರಾಮದ ಪರಮೇಶ್ವರ ಮಾದೇವ ಮಡಿವಾಳ ಹಾಗೂ ಶಿವಪ್ಪ ಬಸ್ಯಾ ಗೌಡ ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ಕೆಳಗಿನ ಬ್ಯಾಗದ್ದೆ ಗ್ರಾಮದ ಶಿವರಾಮ ತಿಮ್ಮಾ ನಾಯ್ಕ ಪರಾರಿಯಾಗಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಆ.17 ರಂದು ಜಿಂಕೆ ಹತ್ಯೆ ಮಾಡಿರುವ ಕುರಿತು ದೂರು ಬಂದಿತ್ತು. ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದೇವೆ. ಇನ್ನೋರ್ವ ಆರೋಪಿಯ ಹುಡುಕಾಟವನ್ನೂ ನಡೆಸಲಾಗಿದೆ’ ಎಂದು ಬನವಾಸಿ ಆರ್.ಎಫ್.ಒ. ಉಷಾ ಕಬ್ಬೇರ್ ತಿಳಿಸಿದ್ದಾರೆ.

ಡಿಸಿೆಫ್ ಅಜ್ಜಯ್ಯ ಜಿ.ಆರ್., ಎಸಿಎಫ್ ಅಶೋಕ ಅಲಗೂರ ಮಾರ್ಗದರ್ಶನದಲ್ಲಿ ಬನವಾಸಿ ವಲಯ ಅರಣ್ಯ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿತ್ತು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು