ನಾಯಿ ದಾಳಿಯಿಂದ ಜಿಂಕೆಯ ರಕ್ಷಣೆ

7

ನಾಯಿ ದಾಳಿಯಿಂದ ಜಿಂಕೆಯ ರಕ್ಷಣೆ

Published:
Updated:
Deccan Herald

ಯಲ್ಲಾಪುರ: ನಾಯಿಯ ದಾಳಿಯಿಂದ ತಪ್ಪಿಸಿಕೊಂಡು ಬಂದು ಪಟ್ಟಣಕ್ಕೆ ಬಂದ ಜಿಂಕೆಯನ್ನು ವಿದ್ಯಾರ್ಥಿಗಳು ಬುಧವಾರ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ನೀರು ಕುಡಿಯಲು ಕಾಡಿನಿಂದ ರವೀಂದ್ರ ನಗರದ ಕೆರೆಗೆ ಬಂದಿದ್ದ ಅದ‌ನ್ನು ನಾಯಿ ಅಟ್ಟಿಸಿಕೊಂಡು ಬಂದಿತ್ತು. ತಪ್ಪಿಸಿಕೊಳ್ಳಲು ಓಡಿದಾಗ ಹೊಂಡದಲ್ಲಿ ಬಿದ್ದು ಗಾಯಗೊಂಡಿತ್ತು. ಅಲ್ಲೂ ಬಿಡದ ನಾಯಿ ಜಿಂಕೆಯನ್ನು ಕಚ್ಚಿ ಗಾಯಗೊಳಿಸಿತ್ತು. ಅದನ್ನು ಗಮನಿಸಿದ ವಿದ್ಯಾರ್ಥಿಗಳಾದ ನಿತ್ಯಾನಂದ ನಾಯ್ಕ, ದಿಲೀಪ್ ನಾಯ್ಕ, ದೀಕ್ಷಾ, ಅಶೋಕ್ ನಾಯ್ಕ ಹಾಗೂ ಗಂಗಾಧರ ನಾಯ್ಕ ಜಿಂಕೆಯ ರಕ್ಷಣೆಗೆ ಧಾವಿಸಿದರು.

ಡಾ.ಸುಬ್ರಾಯ ಭಟ್ಟ ಜಿಂಕೆಗೆ ಚಿಕಿತ್ಸೆ ನೀಡಿದರು. ಅದು ಗುಣಮುಖವಾದ ನಂತರ ಕಾಡಿಗೆ ಬಿಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಬಾಲಸುಬ್ರಹ್ಮಣ್ಯ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !