ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ವಿಭಾಗ ಪ್ರಾರಂಭಿಸಲು ಹೆಚ್ಚಿದ ಬೇಡಿಕೆ

ಜೊಯಿಡಾದ ಸರ್ಕಾರಿ ಕಾಲೇಜಿನಲ್ಲಿಲ್ಲ ಅವಕಾಶ: ಕಲೆ, ವಿಜ್ಞಾನ ಅಧ್ಯಯನದ ಅನಿವಾರ್ಯತೆ
Last Updated 27 ಮೇ 2019, 13:21 IST
ಅಕ್ಷರ ಗಾತ್ರ

ಜೊಯಿಡಾ: ತಾಲ್ಲೂಕಿನಲ್ಲಿ ವಾಣಿಜ್ಯ ವಿಷಯ ಅಧ್ಯಯನಕ್ಕೆ ದಾಖಲಾತಿ ಪಡೆದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ವರ್ಷವೂ ಹೆಚ್ಚಾಗುತ್ತಿದೆ. ಆದರೆ, ಇಲ್ಲಿರುವ ಏಕೈಕ ಸರ್ಕಾರಿ ಕಾಲೇಜಿನಲ್ಲಿಇದಕ್ಕೆಅವಕಾಶವಿಲ್ಲ. ಹಾಗಾಗಿ ಅನುದಾನಿತ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆದುಕೊಳ್ಳುವ ಅನಿವಾರ್ಯತೆ ಇದೆ.

ತಾಲ್ಲೂಕಿನ ಏಕೈಕ ಸರ್ಕಾರಿ ಪಿಯು ಕಾಲೇಜು ಕುಂಬಾರವಾಡಾದಲ್ಲಿದೆ. ಇಲ್ಲಿ ಕಲಾ ವಿಭಾಗಕ್ಕೆಐದುಮತ್ತು ವಿಜ್ಞಾನ ವಿಭಾಗಕ್ಕೆಮೂವರುವಿದ್ಯಾರ್ಥಿಗಳು ಮಾತ್ರ 2019– 20ನೇ ಶೈಕ್ಷಣಿಕ ವರ್ಷಕ್ಕೆ ಈವರೆಗೆ ದಾಖಲಾತಿ ಪಡೆದುಕೊಂಡಿದ್ದಾರೆ. ಇದನ್ನು ಹೊರತುಪಡಿಸಿ,ಬಿಜಿವಿಎಸ್ಕಲಾ ಹಾಗೂ ವಾಣಿಜ್ಯ ಖಾಸಗಿ ಅನುದಾನಿತ ಎರಡು ಪಿಯು ಕಾಲೇಜುಗಳಿದ್ದು, ಒಂದು ತಾಲ್ಲೂಕುಕೇಂದ್ರದಲ್ಲಿ ಹಾಗೂ ಇನ್ನೊಂದು ರಾಮನಗರದಲ್ಲಿದೆ.

ತಾಲ್ಲೂಕಿನಲ್ಲಿ ಮೊದಲ ವಾರ ಒಟ್ಟು 229 ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದಾರೆ.ಅದರಲ್ಲಿ 142, ಅಂದರೆ ಶೇ 62ರಷ್ಟು ವಿದ್ಯಾಥಿಗಳು ವಾಣಿಜ್ಯ ವಿಭಾಗಕ್ಕೆ ದಾಖಲಾತಿ ಪಡೆದಿದ್ದಾರೆ. ಶೈಕ್ಷಣಿಕ ವರ್ಷಾರಂಭದ ಮೊದಲ ವಾರ ರಾಮನಗರದಬಿಜಿವಿಎಸ್‌ ಕಾಲೇಜಿನಲ್ಲಿ ವಾಣಿಜ್ಯ ವಿಭಾಗಕ್ಕೆ 70 ಮತ್ತು ಕಲಾ ವಿಭಾಗಕ್ಕೆ 32 ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದಾರೆ. ತಾಲ್ಲೂಕು ಕೇಂದ್ರಜೊಯಿಡಾದಲ್ಲಿ ವಾಣಿಜ್ಯ ವಿಭಾಗಕ್ಕೆ 72 ಮತ್ತು ಕಲಾ ವಿಭಾಗಕ್ಕೆ 47 ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದಾರೆ.

ಪದವಿಪೂರ್ವ ಶಿಕ್ಷಣ ಇಲಾಖೆಯ 2019– 2020ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಥಮ ಹಾಗೂ ದ್ವಿತೀಯ ಪಿಯು ತರಗತಿಗಳನ್ನುಮೇ 20ರಿಂದ ಪ್ರಾರಂಭಿಸುವಂತೆ ಕಾಲೇಜುಗಳಿಗೆ ಆದೇಶಿಸಿತ್ತು. ಅದರಂತೆ, ಎಲ್ಲೆಡೆ ಕಾಲೇಜು ಅಂದಿನಿಂದ ಆರಂಭವಾಗಿದೆ.

‘ವಾಣಿಜ್ಯ ವಿಷಯ ಅಧ್ಯಯನಬಯಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಸರ್ಕಾರದ ನಿಯಮದಂತೆ ಒಂದು ವಿಭಾಗಕ್ಕೆ ಗರಿಷ್ಠ 80 ವಿದ್ಯಾರ್ಥಿಗಳಿಗೆ ದಾಖಲಾತಿ ನೀಡಲು ಅವಕಾಶವಿದೆ. ಆದ್ದರಿಂದ ಕಳೆದ ವರ್ಷ ಪ್ರವೇಶಾತಿಯ ಆರಂಭದ ದಿನಗಳಲ್ಲಿ ವಾಣಿಜ್ಯ ವಿಭಾಗದ ದಾಖಲಾತಿ ಪೂರ್ಣಗೊಂಡಿತ್ತು.ಇದರಿಂದಾಗಿ, ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದವಿದ್ಯಾರ್ಥಿಗಳಿಗೆ ವಾಣಿಜ್ಯ ವಿಭಾಗದ ಪ್ರವೇಶ ದೊರತಿರಲಿಲ್ಲ. ಆದರೆ, ಈ ವರ್ಷ ಸರ್ಕಾರ ಗರಿಷ್ಠಮಿತಿಯನ್ನು 80ರಿಂದ 100ಕ್ಕೆ ಹೆಚ್ಚಿಸಿದೆ. ಇದರಿಂದ ಮತ್ತೊಂದಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ’ ಎನ್ನುತ್ತಾರೆ ಜೊಯಿಡಾ ಬಿ.ಜಿ.ವಿ.ಎಸ್‌ ಪಿ.ಯು ಕಾಲೇಜಿನ ಪ್ರಾಚಾರ್ಯ ಮಂಜನಾಥ ಶೆಟ್ಟಿ.

‘ಕಲಾ, ವಿಜ್ಞಾನಕ್ಕೆ ಕಡಿಮೆಯಾಗಬಹುದು’:‘ವಾಣಿಜ್ಯವಿಭಾಗಪ್ರಾರಂಭಿಸಲು ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯಬೇಕು.ಆ ವಿಭಾಗ ಪ್ರಾರಂಭವಾದರೆಕಲಾ ಮತ್ತು ವಿಜ್ಞಾನ ವಿಭಾಗಕ್ಕೆ ದಾಖಲಾತಿ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತದೆ’ ಎಂಬುದುಕುಂಬಾರವಾಡಾ ಸರ್ಕಾರಿ ಪಿಯು ಕಾಲೇಜಿನ ಪ್ರಭಾರ ಪ್ರಾಚಾರ್ಯ ವಿ.ಆರ್.ಶೇಟ್ ಅವರ ಆತಂಕವಾಗಿದೆ.

‘ಕುಂಬಾರವಾಡಾ ಸರ್ಕಾರಿ ಪಿ.ಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಇಲ್ಲದ ಕಾರಣ ದಾಖಲಾತಿ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಈ ವಿಭಾಗ ಪ್ರಾರಂಭವಾದರೆ ಕುಂಬಾರವಾಡಾ, ಅಣಶಿ, ಉಳವಿ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎನ್ನುವುದು ಸ್ಥಳೀಯ ನಿವಾಸಿ, ಸ್ನಾತಕೋತ್ತರ ಪದವೀಧರಲಖನ ದೇಸಾಯಿ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT