ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಾರತಮ್ಯವಿಲ್ಲದೆ ಪರಿಹಾರ ನೀಡಿ’

Last Updated 8 ಆಗಸ್ಟ್ 2022, 14:16 IST
ಅಕ್ಷರ ಗಾತ್ರ

ಶಿರಸಿ: ‘ಅತಿವೃಷ್ಟಿಯಿಂದ ಸರ್ಕಾರ ಘೋಷಿಸಿದ ಮಾನದಂಡದ ಅಡಿಯಲ್ಲಿಯೇ, ಅರಣ್ಯ ಅತಿಕ್ರಮಣದಾರರಿಗೂ ನೀಡಬೇಕು. ಅಲ್ಲದೇ, ಕಂದಾಯ ಭೂಮಿ ಹಕ್ಕುದಾರರಿಗೆ ನೀಡುವ ನೀತಿಯನ್ನೇ ಅರಣ್ಯ ಅತಿಕ್ರಮಣದಾರರ ವಾಸ್ತವ್ಯ ಹಾಗೂ ಸಾಗುವಳಿ ಬೆಳೆಗೆ ನಷ್ಟವಾಗಿರುವವರಿಗೂ ಪ್ಯಾಕೇಜ್ ಆಧಾರದ ಮೇಲೆ ಆರ್ಥಿಕ ಸಹಾಯ ನೀಡಬೇಕು’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಒತ್ತಾಯಿಸಿದ್ದಾರೆ.

ಅತಿವೃಷ್ಟಿಯಿಂದ ಹಾನಿಗೀಡಾದ ತಾಲ್ಲೂಕಿನ ವಿವಿಧ ಅರಣ್ಯ ಅತಿಕ್ರಮಣದಾರರ ಮನೆಗೆ ಸೋಮವಾರ ಭೇಟಿ ನೀಡಿದ ಅವರು ಸಂತ್ರಸ್ತರನ್ನು ಸಂತೈಸಿದರು.

‘ಸರ್ಕಾರ ಅರಣ್ಯ ಅತಿಕ್ರಮಣದಾರರಿಗೆ ಮಣ್ಣಿನ ಗೋಡೆಯ ಮನೆಗಳಿಗೆ ಪ್ರಕೃತಿ ವಿಕೋಪದಿಂದ ಭಾಗಶಃ ಹಾನಿಗೊಳಗಾಗಿರುವುದಕ್ಕೆ ₹ 3200 ನೀಡುತ್ತಿರುವುದು ಬೇಸರದ ವಿಚಾರ. ಪ್ಯಾಕೇಜ್ ಆಧಾರದಲ್ಲಿ ತಾರತಮ್ಯವಿಲ್ಲದೇ ಆರ್ಥಿಕ ಪರಿಹಾರ ನಿಧಿ ನೀಡಬೇಕು’ ಎಂದು ಒತ್ತಾಯಿಸಿದರು.

‘ಪ್ರಕೃತಿ ವಿಕೋಪದಿಂದ ಉಂಟಾಗಿರುವ ವಾಸ್ತವ್ಯದ ನಷ್ಟದ ಸಮೀಕ್ಷೆ ಕಾರ್ಯ ಚುರುಕಾಗಿ ನಡೆಸಬೇಕು. ನಷ್ಟದ ಆರ್ಥಿಕ ಸಹಾಯಧನ ಕೇವಲ ಶೇ.50 ರಷ್ಟು ಸಂತ್ರಸ್ತರಿಗೆ ಮಾತ್ರ ತಲುಪಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT