ದೇವಳಮಕ್ಕಿ: ದತ್ತಾತ್ರೇಯ ದೇವರ ರಥೋತ್ಸವ

ಶನಿವಾರ, ಏಪ್ರಿಲ್ 20, 2019
29 °C

ದೇವಳಮಕ್ಕಿ: ದತ್ತಾತ್ರೇಯ ದೇವರ ರಥೋತ್ಸವ

Published:
Updated:
Prajavani

ಕಾರವಾರ: ತಾಲ್ಲೂಕಿನ ದೇವಳಮಕ್ಕಿ ಗ್ರಾಮದಲ್ಲಿ ಶ್ರೀ ದತ್ತಾತ್ರೇಯ ದೇವರ ರಥೋತ್ಸವ ಏ.11 ಮತ್ತು 12ರಂದು ಅದ್ಧೂರಿಯಾಗಿ ನೆರವೇರಿತು. 11ರಂದು ಬೆಳಿಗ್ಗೆ 8ಕ್ಕೆ ಭಕ್ತರಿಂದ ಭಿಕ್ಷಾಟನೆ ನಡೆಸಲಾಯಿತು.

ದೇವರರಿಗೆ ಪಂಚಾಮೃತ ಅಭಿಷೇಕ, ರಥಾರೋಹಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.  ಮಹಾಮಂಗಳಾರತಿ ನಡೆಸಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಯಿತು. ರಥವು ದೇವಳಮಕ್ಕಿ ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿತು. ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ ಕೂಡ ಭಾಗವಹಿಸಿದ್ದರು. ನಂತರ ದೇವರ ಮಹಾಪೂಜೆ ನಡೆಸಲಾಯಿತು.

ಹಣಕೋಣದ ಸಾಕಾರ ನಾಟಕ ಸಂಘದಿಂದ ‘ಸಕಾ ತುಕಾ ರಾಮ ರಾಮ’ ಎಂಬ ಕೊಂಕಣಿ ಕೌಟುಂಬಿಕ ಸಾಮಾಜಿಕ ನಾಟಕ ಪ್ರದರ್ಶನ ಏರ್ಪಡಿಸಲಾಯಿತು. 12ರಂದು ಧಯಕಾಲೋ ನೆರವೇರಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !