ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಳಮಕ್ಕಿ ಶಾಲೆಗೆ ಹೊಸ ಕೊಠಡಿ ನಿರ್ಮಿಸಲು ಒತ್ತಾಯ

Last Updated 21 ಆಗಸ್ಟ್ 2019, 13:57 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ದೇವಳಮಕ್ಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಸೋರುತ್ತಿದೆ. ಇದರಿಂದ ತರಗತಿಗಳ ಮಣ್ಣಿನ ಗೋಡೆಗಳುಕುಸಿಯಬಹುದು ಎಂದು ಗ್ರಾಮಸ್ಥರು ಮತ್ತು ಹಳೆ ವಿದ್ಯಾರ್ಥಿಗಳುಆತಂಕ ವ್ಯಕ್ತಪಡಿಸಿದ್ದಾರೆ.

ಇಲ್ಲಿ 64 ವಿದ್ಯಾರ್ಥಿಗಳಿದ್ದು, ಮುಖ್ಯ ಶಿಕ್ಷಕರೂ ಸೇರಿದಂತೆಮೂವರು ಶಿಕ್ಷಕರಿದ್ದಾರೆ. ಆದರೆ, ಕೊಠಡಿಗಳ ಕೊರತೆ ಇರುವ ಕಾರಣಮುಖ್ಯ ಶಿಕ್ಷಕರ ಕೊಠಡಿಯಲ್ಲೇ ಎರಡು ತರಗತಿಗಳನ್ನು ನಡೆಸಲಾಗುತ್ತಿದೆ. ನಾಲ್ಕು ಕೊಠಡಿಗಳು ಮಣ್ಣಿನ ಗೋಡೆ ಹೊಂದಿವೆ. ಅದನ್ನು ಇನ್ನೂ ದುರಸ್ತಿ ಮಾಡಿಲ್ಲ. ಈ ಹಿಂದೆಯೂ ಎರಡು ಕೊಠಡಿಗಳ ಗೋಡೆಗಳು ಕುಸಿದಿದ್ದವು. ಅವುಗಳಿಗೆ ಹೊಸ ಗೋಡೆಗಳನ್ನು ನಿರ್ಮಿಸಲು ಅನುದಾನ ಮಂಜೂರು ಮಾಡಿಲ್ಲ. ಇದೇ ರೀತಿ ಉಳಿದ ಗೋಡೆಗಳೂ ಬಿದ್ದರೆ ಯಾರು ಜವಾಬ್ದಾರಿ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ಗುಡ್ಡಗಾಡು ಪ್ರದೇಶದಿಂದ ಕೂಡ ವಿದ್ಯಾರ್ಥಿಗಳು ಬರುತ್ತಾರೆ.ಶಾಲೆಗೆ ನಾಮಫಲಕವೂ ಇಲ್ಲ. ಈ ಎಲ್ಲ ಸಮಸ್ಯೆಗಳ ಬಗ್ಗೆಶಿಕ್ಷಣ ಇಲಾಖೆಗೆಮನವಿ ನೀಡಿದರೂ ಏನೂಕ್ರಮ ಕೈಗೊಂಡಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರೂಪೇಶ ನಾಯ್ಕ, ಉಪಾಧ್ಯಕ್ಷೆ ಅನೀಶಾ ಸಾವೊಗೇಕರ, ಸದ್ಯಸರಾದ ವಿಲಾಶ ಆಚಾರಿ, ಗಣಪತಿ ಗೌಡ ದೂರಿದ್ದಾರೆ.

‘ಶಾಲೆಯ ಅಭಿವೃದ್ಧಿಗೆ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು.ಹಳೆಯ ಮಣ್ಣಿನ ಗೋಡೆಗಳನ್ನು ತೆರವು ಮಾಡಿಹೊಸದಾಗಿ ಗಟ್ಟಿಮುಟ್ಟಾದ ಕೊಠಡಿಗಳನ್ನು ಶಾಲೆಗೆ ಮಂಜೂರುಮಾಡಬೇಕು. ಶಾಲೆಯ ನಾಲ್ಕು ಕಡೆಯಿಂದಲೂ ಸುಸಜ್ಜಿತ ಕಾಂಪೌಂಡ್ನಿರ್ಮಿಸಬೇಕು’ ಎಂದು ಶಾಲೆಯ ಹಳೆ ವಿದ್ಯಾರ್ಥಿಪ್ರಜ್ವಲ್ ಬಾಬುರಾಯ ಶೇಟ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT