ಶುಕ್ರವಾರ, ಅಕ್ಟೋಬರ್ 22, 2021
28 °C

ಶಿರಸಿಯಲ್ಲಿ ಶತಕ ದಾಟಿದ ಡೀಸೆಲ್ ದರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಶನಿವಾರ ಹೆಚ್ಚಿಸಿದ್ದು, ಶಿರಸಿ ನಗರದಲ್ಲಿ ಲೀಟರ್ ಡೀಸೆಲ್ ದರ ₹ 100.12ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಡೀಸೆಲ್ ದರವು ಮೊದಲಿಗೆ ₹ 100ರ ಗಡಿ ದಾಟಿದ್ದು ಶಿರಸಿ ನಗರದಲ್ಲಿ.

ಶುಕ್ರವಾರ ಇಲ್ಲಿ ಡೀಸೆಲ್ ಬೆಲೆ ₹ 99.75 ಇತ್ತು. ಪೆಟ್ರೋಲ್ ದರವು ₹ 100 ಗಡಿಯನ್ನು ಮೊದಲಿಗೆ ದಾಟಿದ್ದು ಕೂಡ ಶಿರಸಿ ನಗರದಲ್ಲೇ. ಜೂನ್ 6 ರಂದು ಇಲ್ಲಿ ಪೆಟ್ರೋಲ್ ದರ ₹ 100ರ ಗಡಿ ದಾಟಿತ್ತು.

‘ಶಿರಸಿಗೆ ಮಂಗಳೂರಿನಿಂದ ಪೆಟ್ರೋಲ್, ಡೀಸೆಲ್ ಪೂರೈಕೆ ಆಗುತ್ತಿದೆ. ಸಾಗಾಣಿಕೆ ವೆಚ್ಚ ಹೆಚ್ಚು ಇರುವ ಕಾರಣ, ರಾಜ್ಯದ ಇತರ ಕಡೆಗಳಿಗಿಂತ ಇಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಜಾಸ್ತಿ’ ಎಂದು ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ತಿಳಿಸಿದರು.

‘ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಣೆ ವೆಚ್ಚ ಅಧಿಕಗೊಳ್ಳಲಿದೆ. ಇದು ಎಲ್ಲ ವಿಧದ ವಸ್ತುಗಳ ದರ ಏರಿಕೆಗೆ ಕಾರಣವಾಗಲಿದೆ. ತೈಲ ಬೆಲೆಯಲ್ಲಿ ಸ್ಥಿರತೆ ಇಲ್ಲದಿರುವುದು ಸರಕು ಸಾಗಣೆ ವೆಚ್ಚ ನಿಗದಿ ಮಾಡುವುದಕ್ಕೆ ಸಮಸ್ಯೆ ತಂದೊಡ್ಡುತ್ತಿದೆ’ ಎಂದು ಶಿರಸಿಯ ಸರಕು ಸಾಗಣೆ ಉದ್ಯಮಿ ಶ್ರೀನಿವಾಸ ನಾಯ್ಕ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು