ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್ ಮ್ಯಾಪಿಂಗ್ ಮೂಲಕ ಅಂಗವಿಕಲ ಮತದಾರರ ಟ್ರ್ಯಾಕಿಂಗ್

Last Updated 5 ಡಿಸೆಂಬರ್ 2019, 8:44 IST
ಅಕ್ಷರ ಗಾತ್ರ

ಶಿರಸಿ: ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ 2,024 ಅಂಗವಿಕಲ ಮತದಾರರಿದ್ದು, ಮತ ಚಲಾಯಿಸಲು ಬರುವ ಇವರನ್ನು ಗೂಗಲ್ ಮ್ಯಾಪಿಂಗ್ ಮೂಲಕ ಟ್ರ್ಯಾಕಿಂಗ್ ಮಾಡಲಾಗುತ್ತಿದೆ.

ಕಳೆದ ಚುನಾವಣೆಯಲ್ಲಿ ಈ ಮತದಾರರನ್ನು ಆಯೋಗವು ಮತಗಟ್ಟೆಗೆ ಕರೆದುಕೊಂಡು ಬಂದು ಮತದಾನ ಮಾಡಿಸುವ ಯೋಜನೆ ರೂಪಿಸಿ ಯಶಸ್ವಿಯಾಗಿತ್ತು. ಈ ಉಪ ಚುನಾವಣೆಯಲ್ಲಿ ಸಹ ಇದೇ ಯೋಜನೆಯನ್ನು ಮುಂದುವರಿಸಿದೆ.

ಯಲ್ಲಾಪುರ ಕ್ಷೇತ್ರದಲ್ಲಿ ಇರುವ ಅಂಗವಿಕಲ ಮತದಾರರ ಹೆಸರು, ವಿಳಾಸವನ್ನು ದಾಖಲಿಸಿ, ಮತದಾನದ ದಿನ ಅವರನ್ನು ಕರೆದುಕೊಂಡು ಬರುವ ವ್ಯವಸ್ಥೆ ಮಾಡಲಾಗಿದೆ. ಈ ಮತದಾರರು ಮತ ಚಲಾಯಿಸಿದ ನಂತರ ಅವರ ಹೆಸರಿನ ಮುಂದಿರುವ ಬಣ್ಣ ಬದಲಾಗುತ್ತದೆ. ಆ ಮೂಲಕ‌ ಅವರ ಮತದಾನ ಮಾಡಿರುವುದನ್ನು ದೃಢಪಡಿಸಿಕೊಳ್ಳಲಾಗುತ್ತದೆ.

ಗೂಗಲ್ ಮ್ಯಾಪ್ ಮೂಲಕ ಅಂಗವಿಕಲ ಮತದಾರರು ಎಲ್ಲಿದ್ದಾರೆ? ಅವರ ಮತಗಟ್ಟೆ ಸಂಖ್ಯೆ ಯಾವುದು? ಮತದಾನ ಆಗಿದೆಯೇ ಇಲ್ಲವೇ ಎಂದು ಕುಳಿತಲ್ಲಿಯೇ ಅಧಿಕಾರಿಗಳು ಟ್ರ್ಯಾಕ್ ಮಾಡುತ್ತಿದ್ದಾರೆ.
ಬೆಳಗ್ಗೆ 10 ಗಂಟೆವರೆಗೆ 202 ಅಂಗವಿಕಲ ಮತದಾರರು ಮತದಾನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT