ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್ ಕಾಯಿನ್: ಬೆಂಕಿ ಇಲ್ಲದೆ ಹೊಗೆ ಬರದು; ಶಂಭು ಶೆಟ್ಟಿ

Last Updated 15 ನವೆಂಬರ್ 2021, 17:03 IST
ಅಕ್ಷರ ಗಾತ್ರ

ಕಾರವಾರ: ‘ಬಿಟ್ ಕಾಯಿನ್ ಹಗರಣದಿಂದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಬಿ.ಜೆ.ಪಿ ಜಿಲ್ಲಾ ಘಟಕದ ವಕ್ತಾರರುಕಂಗಾಲಾಗಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸುಖಾಸುಮ್ಮನೆ ಅವಹೇಳನ ಮಾಡುವ ಮೊದಲು, ಬೆಂಕಿ ಇಲ್ಲದೆ ಹೊಗೆ ಬರುವುದಿಲ್ಲ ಎಂಬ ಸತ್ಯವನ್ನು ಅರಿಯಬೇಕಾಗಿದೆ’ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಸಮಿತಿ ವಕ್ತಾರ ಕೆ.ಶಂಭು ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

‘ದೇಶದೆಲ್ಲೆಡೆ ಸದ್ದು ಮಾಡುತ್ತಿರುವ ಈ ಹಗರಣವು ₹ 2,500 ಕೋಟಿಯದ್ದು. ಇದನ್ನು ಸುಮ್ಮನೆ ಚುನಾವಣೆಗಾಗಿ ಹರಡಿಸಿರುವ ಗಾಳಿ ಮಾತು ಅಲ್ಲವೇ ಅಲ್ಲ ಎಂದು ಬಿ.ಜೆ.ಪಿ ನಾಯಕರು ತಿಳಿದು ಆತ್ಮ ವಿಮರ್ಶೆ ಮಾಡಬೇಕಾಗುತ್ತದೆ. ರಫೇಲ್ ಹಗರಣವನ್ನು ದೇಶದಲ್ಲಿ ಮುಚ್ಚಿಟ್ಟದ್ದರೂ ಫ್ರಾನ್ಸ್ ದೇಶದ ಸಂಬಂಧಿತ ಸಂಸ್ಥೆಗಳೇ ತನಿಖೆಗೆ ಆದೇಶಿಸಿವೆ’ ಎಂದು ಹೇಳಿದ್ದಾರೆ.

‘ಬಿಟ್ ಕಾಯಿನ್ ಹಗರಣದಲ್ಲಿ ರಾಜ್ಯ ಸರ್ಕಾರದ ಯಾವುದೇ ಮಂತ್ರಿಗಳು ಭಾಗಿ ಅಲ್ಲದಿದ್ದರೆ ರಾಜ್ಯದಾದ್ಯಂತ ಸಚಿವರು ಕಾಂಗ್ರೆಸ್ ಪಕ್ಷದ ಮೇಲೆ ಮುಗಿಬೀಳಲು ಕಾರಣವೇನು? ಬಿ.ಜೆ.ಪಿ ಸರ್ಕಾರವು ಈ ಹಗರಣದ ಸತ್ಯಾಸತ್ಯತೆಯ ಬಗ್ಗೆ ಕೂಲಂಕಷ ತನಿಖೆ ನಡೆಸಿ, ತಪ್ಪಿತಸ್ಥರು ಯಾರೇ ಇದ್ದರೂ ಅವರನ್ನು ಶಿಕ್ಷಿಸಬೇಕು’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT