ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ರಾಮಚಂದ್ರ ಭಟ್ಟರಿಗೆ ಎನ್.ರಂಗನಾಥ ಶರ್ಮಾ ಪ್ರಶಸ್ತಿ

Last Updated 10 ಡಿಸೆಂಬರ್ 2020, 6:27 IST
ಅಕ್ಷರ ಗಾತ್ರ

ಶಿರಸಿ: ಎನ್.ರಂಗನಾಥ ಶರ್ಮಾ ಪ್ರಶಸ್ತಿಯನ್ನು ಈ ಬಾರಿ ಬೆಂಗಳೂರಿನ ಶ್ರೀವ್ಯಾಸ ಯೋಗ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಕೋಟೆಮನೆಯ ವಿದ್ವಾನ್ ಡಾ.ರಾಮಚಂದ್ರ ಭಟ್ಟ ಅವರಿಗೆ ನೀಡಲಾಗುವುದು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಡಿ.18 ರಂದು ಕೊಪ್ಪ ತಾಲ್ಲೂಕಿನ ಪ್ರಭೋದಿನಿ ಗುರುಕುಲದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ₹10 ಸಾವಿರ ನಗದು, ಸರಸ್ವತಿ ವಿಗ್ರಹ, ಪ್ರಮಾಣ ಪತ್ರವನ್ನು ಒಳಗೊಂಡಿದೆ ಎಂದು ತಿಳಿಸಿದರು.

ಸಂಸ್ಕೃತ ಸಾಹಿತ್ಯದಲ್ಲಿ ಸಾಧನೆ ಮಾಡಿದವರಿಗೆ ನೀಡುವ ರಾಜ್ಯಮಟ್ಟದ ಪ್ರಶಸ್ತಿ ಇದು. ಸಾಹಿತ್ಯ ಪರಿಷತ್ತು ಹಾಗೂ ವಿದ್ವಾನ್ ರಂಗನಾಥ ಶರ್ಮಾ ಸೇವಾ ಪ್ರತಿಷ್ಠಾನ ಜಂಟಿಯಾಗಿ ಈ ಪ್ರಶಸ್ತಿ ನೀಡುತ್ತಿವೆ. 2018ರಿಂದ ಇದನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶೃಂಗೇರಿಯಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ನಿರ್ದೇಶಕಪ್ರೊ.ಸುಬ್ರಾಯ ಭಟ್ಟ ವಹಿಸಲಿದ್ದಾರೆ. ವಿಧ್ವಾಂಸ ಡಾ.ಗಿರಿಧರ ಶಾಸ್ತ್ರಿ ಮುಖ್ಯ ಮಾತು ಆಡಲಿದ್ದಾರೆ ಎಂದು ತಿಳಿಸಿದರು. ಪ್ರಕಾಶ ಭಾಗವತ, ಡಿ.ಎಸ್.ನಾಯ್ಕ, ಜಗದೀಶ ಭಂಡಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT