ಭಾನುವಾರ, ಆಗಸ್ಟ್ 25, 2019
25 °C

ಉಕ್ಕಿ ಹರಿದ ಚರಂಡಿ: ರಸ್ತೆ, ಮನೆ ಜಲಾವೃತ

Published:
Updated:
Prajavani

ಕಾರವಾರ: ನಗರದ ಕಾಳಿ ನದಿ ಮತ್ತು ಸಮುದ್ರದ ಅಳಿವೆ ಬಳಿಯ ಪಂಚರ್ಷಿವಾಡಾದ ಹಲವು ಮನೆಗಳ ಅಂಗಳಕ್ಕೆ ಭಾನುವಾರ ಕೊಳಚೆ ನೀರು ಹರಿಯಿತು.

ಕಾಜುಭಾಗ, ಕ್ವಾರ್ಟರ್ಸ್ ಪ್ರದೇಶದಿಂದ ಮಳೆ ನೀರು ಹರಿದು ಬಂದು ಸಮುದ್ರ ಸೇರಲು ನಿರ್ಮಿಸಿದ ಚರಂಡಿ ಇಲ್ಲಿದೆ. ಅದರಲ್ಲಿ ಗಿಡಗಂಟೆಗಳು ಬೆಳೆದು ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಜೊತೆಗೇ ಎರಡು ದಿನಗಳಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಹೀಗಾಗಿ ಚರಂಡಿಯಲ್ಲಿ ನೀರು ಉಕ್ಕಿ ಹರಿದು ಮನೆಗಳ ಅಂಗಳ, ರಸ್ತೆಗಳಲ್ಲಿ ತುಂಬಿಕೊಂಡಿತು.

‘ಎರಡು ದಿನಗಳಿಂದ ಈ ರೀತಿಯಾಗುತ್ತಿದೆ. ಸುಮಾರು 25 ಮನೆಗಳಿಗೆ ತೊಂದರೆಯಾಗಿದೆ. ಏಕಾಏಕಿ ನೀರು ತುಂಬಿಕೊಂಡು, ಅರ್ಧ ಗಂಟೆಯ ಅವಧಿಯಲ್ಲಿ ಮತ್ತೆ ಹರಿದು ಹೋಗುತ್ತಿದೆ. ಜನಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಸಾಂಕ್ರಾಮಿಕ ಕಾಯಿಲೆಗಳೂ ಹರಡುವ ಆತಂಕವಿದೆ’ ಎಂದು ಸ್ಥಳೀಯರಾದ ಚಂದ್ರಶೇಖರ್ ಹೇಳಿದರು.

Post Comments (+)