ಕೇಬಲ್ ಅಳವಡಿಸಲು ಚರಂಡಿಗೆ ಮಣ್ಣು; ಮಳೆಗಾಲದಲ್ಲಿ ಸಮಸ್ಯೆ ಸಾಧ್ಯತೆ

ಬುಧವಾರ, ಜೂನ್ 19, 2019
31 °C

ಕೇಬಲ್ ಅಳವಡಿಸಲು ಚರಂಡಿಗೆ ಮಣ್ಣು; ಮಳೆಗಾಲದಲ್ಲಿ ಸಮಸ್ಯೆ ಸಾಧ್ಯತೆ

Published:
Updated:
Prajavani

ಕಾರವಾರ: ತಾಲ್ಲೂಕಿನ ಕುರ್ನಿಪೇಟೆಯಿಂದ ಕೈಗಾಕ್ಕೆ ಹೋಗುವ ರಸ್ತೆಯ ಅಂಚಿನಲ್ಲಿ ಖಾಸಗಿ ದೂರವಾಣಿ ಸಂಸ್ಥೆಯ ಫೈಬರ್ ಕೇಬಲ್‌ಗಳನ್ನು ಅಳವಡಿಸಲಾಗುತ್ತಿದೆ. ಇದಕ್ಕಾಗಿ ಚರಂಡಿಯ ಸಮೀಪದಲ್ಲೇ ಹೊಂಡ ಅಗೆಯಲಾಗಿದ್ದು, ಮಣ್ಣನ್ನು ಅರೆಬರೆಯಾಗಿ ಮುಚ್ಚಲಾಗಿದೆ. ಇದು ಮಳೆಗಾಲದಲ್ಲಿ ಸಮಸ್ಯೆ ತಂದೊಡ್ಡುವ ಸಾಧ್ಯತೆಯಿದೆ. 

ರಸ್ತೆಯ ಅಂಚಿನಲ್ಲಿ ಗುಡ್ಡದಿಂದ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಈ ಮೊದಲೇ ಚರಂಡಿ ನಿರ್ಮಾಣ ಮಾಡಲಾಗಿತ್ತು. ಅದರ ಅಂಚಿನಲ್ಲೇ ಜಿಯೊ ಕಮ್ಯುನಿಕೇಷನ್ಸ್‌ನಿಂದ ಕೇಬಲ್ ಅಳವಡಿಸಲಾಗುತ್ತಿದೆ. ಆದರೆ, ಬಹುತೇಕ ಕಡೆಗಳಲ್ಲಿ ಮಣ್ಣನ್ನು ಚರಂಡಿಯಲ್ಲಿ ರಾಶಿ ಹಾಕಲಾಗಿದೆ. ಮತ್ತೊಂದಷ್ಟು ಪ್ರದೇಶಗಳಲ್ಲಿ ಅರ್ಧಂಬರ್ಧ ಕಾಮಗಾರಿ ಮಾಡಲಾಗಿದೆ. 

ಮಳೆಗಾಲ ಆರಂಭವಾಗುವ ಮೊದಲೇ ಚರಂಡಿಯ ಮಣ್ಣನ್ನು ಸರಿಯಾಗಿ ಮುಚ್ಚದಿದ್ದರೆ ಮಳೆ ನೀರು ರಸ್ತೆಯಲ್ಲೇ ಹರಿದು ಬರಲಿದೆ. ಇದರಿಂದ ಉತ್ತಮವಾದ ರಸ್ತೆಯಲ್ಲಿ ಹೊಂಡ ಬಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಈ ರಸ್ತೆಯಲ್ಲಿ ನಿತ್ಯವೂ ನೂರಾರು ವಾಹನಗಳು ಸಂಚರಿಸುತ್ತವೆ. ಕೈಗಾ ಅಣುವಿದ್ಯುತ್ ಸ್ಥಾವರ, ಕದ್ರಾ ಅಣೆಕಟ್ಟೆಯ ಭಾಗಕ್ಕೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಇದು ಪ್ರಮುಖ ರಸ್ತೆಯಾಗಿದೆ. 

ಮಣ್ಣನ್ನು ಸೂಕ್ತ ಕ್ರಮದಲ್ಲಿ ಮುಚ್ಚಿ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಇಲ್ಲದಿದ್ದರೆ ಅದರ ಕಾಮಗಾರಿಯ ವೆಚ್ಚವನ್ನು ಸಂಬಂಧಿಸಿದ ಸಂಸ್ಥೆಗಳಿಂದ ವಸೂಲಿ ಮಾಡಬೇಕು ಎಂದು ಗ್ರಾಮಸ್ಥ ರೋಹಿತ್ ಒತ್ತಾಯಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !