ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರದ್ಧಾ ಭಕ್ತಿಯಿಂದ ಈದ್‌ ಮಿಲಾದ್‌ ಆಚರಣೆ

ಗಮನ ಸೆಳೆದ ಮೆಕ್ಕಾ ಮದೀನಾ ಸ್ತಬ್ಧ ಚಿತ್ರಗಳು, ಘಜಲ್ ಗಾಯನ, ಮೆರವಣಿಗೆ
Last Updated 10 ನವೆಂಬರ್ 2019, 11:30 IST
ಅಕ್ಷರ ಗಾತ್ರ

ಕಾರವಾರ: ನಗರದಲ್ಲಿ ಭಾನುವಾರ ಬೆಳಿಗ್ಗೆ ಈದ್ ಮಿಲಾದ್ ಹಬ್ಬದ ಸಂಭ್ರಮ ತುಂಬಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದ ಮುಸ್ಲಿಮರು, ಶ್ರದ್ಧಾ ಭಕ್ತಿಯಿಂದ ಹಬ್ಬವನ್ನು ಆಚರಿಸಿದರು.

ಮನೆಗಳಲ್ಲಿ ಹಾಗೂ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪರಸ್ಪರ ಶುಭಾಶಯ ಕೋರಿದರು.

ಅದ್ಧೂರಿ ಮೆರವಣಿಗೆ: ನಗರದ ಹಬ್ಬುವಾಡ ರಸ್ತೆಯಿಂದ ಆರಂಭವಾದ ಮೆರವಣಿಗೆ ಸವಿತಾ ವೃತ್ತ, ಗ್ರೀನ್ ಸ್ಟ್ರೀಟ್ ಮೂಲಕ ಸಾಗಿ ಕೋಡಿಬಾಗದಲ್ಲಿ ಕೊನೆಯಾಯಿತು. ಧ್ವನಿವರ್ಧಕಗಳಲ್ಲಿ ಘಜಲ್ ಗಾಯನ ಹಾಗೂ ಅದರ ಹಿಂದೆ ಸಾಗಿಬಂದ ಮೆಕ್ಕಾ, ಮದೀನಾಗಳ ಸ್ತಬ್ಧಚಿತ್ರಗಳು ಗಮನ ಸೆಳೆದವು.

ನೂರಾರು ಮಂದಿ ಸೇರಿದ್ದ ಈ ಮೆರವಣಿಗೆಯಲ್ಲಿ ಮಕ್ಕಳು ವಿಶೇಷವಾಗಿ ಗಮನ ಸೆಳೆದರು. ಹೊಸ ಬಟ್ಟೆ ಧರಿಸಿ, ಮುಸ್ಲಿಂ ಧರ್ಮದ ಧ್ವಜವನ್ನು ಹಿಡಿದುಕೊಂಡು ಸಾಗುತ್ತಿದ್ದುದು ಕಂಡುಬಂತು. ನೂರಾರು ಯುವಕರು ದ್ವಿಚಕ್ರ ವಾಹನಗಳಲ್ಲಿ ಸಾಗಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸತೀಶ ಸೈಲ್ ಹಾಗೂ ಇತರರು ಗಣಪತಿ ದೇವಸ್ಥಾನದ ಬಳಿ ನಿಂತು ಶುಭಾಶಯ ಕೋರಿದರು. ಪೊಲೀಸರು ಮೆರವಣಿಗೆಗೆ ಭದ್ರತೆ ಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT