ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡದಲ್ಲಿ ಇಂದು ಎಂಟು ಮಂದಿಗೆ ಕೋವಿಡ್ ದೃಢ

Last Updated 21 ಜೂನ್ 2020, 13:47 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಮತ್ತೆ ಎಂಟು ಮಂದಿಗೆ ಕೋವಿಡ್ 19 ದೃಢಪಟ್ಟಿದೆ. ಈ ಪೈಕಿ ನಾಲ್ವರು ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿದ್ದಾರೆ. ಅದೇರೀತಿ, ಕೋವಿಡ್‌ನಿಂದ ಗುಣಮುಖರಾಗಿದ ಏಳು ಮಂದಿಯನ್ನು ಆಸ್ಪತ್ರೆಯಿಂದ ಭಾನುವಾರ ಬಿಡುಗಡೆ ಮಾಡಲಾಯಿತು.

ದೃಢಪಟ್ಟ ಹೊಸ ಪ್ರಕರಣಗಳಲ್ಲಿಮಹಾರಾಷ್ಟ್ರದಿಂದ ಬಂದಿರುವ ಐವರು, ದೆಹಲಿಯಿಂದ ವಾಪಸಾಗಿರುವ ಇಬ್ಬರು, ಉತ್ತರಪ್ರದೇಶದಿಂದಮರಳಿದಒಬ್ಬರು ಸೇರಿದ್ದಾರೆ. ಇವರಲ್ಲಿ ಭಟ್ಕಳದ ಐವರು, ಶಿರಸಿಯ ಇಬ್ಬರು ಹಾಗೂ ಯಲ್ಲಾಪುರದ ಒಬ್ಬರಿದ್ದಾರೆ.

ಏಳು ಮಂದಿ ಗುಣಮುಖ: ಕೋವಿಡ್‌ನಿಂದ ಗುಣಮುಖರಾದ ಏಳು ಮಂದಿಯನ್ನು ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್ ವಾರ್ಡ್‌ನಿಂದ ಭಾನುವಾರ ಬಿಡುಗಡೆ ಮಾಡಲಾಯಿತು. ಅವರಲ್ಲಿ ದಾಂಡೇಲಿಯ ಒಂಬತ್ತು ವರ್ಷದ ಬಾಲಕ, ಶಿರಸಿಯ 62 ವರ್ಷದ ಮಹಿಳೆ ಹಾಗೂ 62 ವರ್ಷ ಪುರುಷ, ಹಳಿಯಾಳದ 45 ವರ್ಷದ ಪುರುಷ ಹಾಗೂ 12 ವರ್ಷ ಬಾಲಕ, ಜೊಯಿಡಾದ 24 ವರ್ಷದ ಮಹಿಳೆ ಮತ್ತು ಕುಮಟಾದ 35 ವರ್ಷ ಪುರುಷ ಇದ್ದಾರೆ.

ಜಿಲ್ಲೆಯಲ್ಲಿ ಸದ್ಯ 32 ಸಕ್ರಿಯ ಪ್ರಕರಣಗಳಿದ್ದು, 106 ಮಂದಿ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT