ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಸುಕಿನಲ್ಲೇ ಮತಗಟ್ಟೆಗೆ ಪ್ರಯಾಣಿಸಿದ ಸಿಬ್ಬಂದಿ

Last Updated 22 ಏಪ್ರಿಲ್ 2019, 12:50 IST
ಅಕ್ಷರ ಗಾತ್ರ

ಕಾರವಾರ:17ನೇ ಲೋಕಸಭಾ ಚುನಾವಣೆಗೆ ಮತ ಚಲಾಯಿಸಲು ಕ್ಷೇತ್ರದ ಮತದಾರರು ಸಜ್ಜಾಗಿದ್ದಾರೆ. ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ಪಾರದರ್ಶಕ ಮತದಾನಕ್ಕೆ ಜಿಲ್ಲಾಡಳಿತವೂ ಸಕಲ ಸಿದ್ಧತೆ ಮಾಡಿಕೊಂಡಿದೆ. ಸಿಬ್ಬಂದಿಯೂ ಸೋಮವಾರ ಬೆಳಿಗ್ಗೆಯೇ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಪ್ರಯಾಣಿಸಿದರು.

ಮೇ 23ಕ್ಕೆ ಮತ ಎಣಿಕೆ:ಏ.23ರಂದು ಮತ ಪೆಟ್ಟಿಗೆಗಳಲ್ಲಿ ಭದ್ರವಾದ ಅಭ್ಯರ್ಥಿಗಳ ಭವಿಷ್ಯ, ಮೇ 23ರಂದು ಬಹಿರಂಗಗೊಳ್ಳಲಿದೆ. ಕುಮಟಾದ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. ಅಲ್ಲಿ ಈಗಾಗಲೇ ಸ್ಟ್ರಾಂಗ್ ರೂಂ, ಮತ ಎಣಿಕೆ ಕೊಠಡಿಗಳನ್ನು ಸಜ್ಜುಗೊಳಿಸಲಾಗಿದೆ. ಸಿಬ್ಬಂದಿಗೂ ಅಗತ್ಯ ತರಬೇತಿ ಕೈಗೊಳ್ಳಲಾಗಿದೆ.

ಬಿಗಿ ಭದ್ರತೆ:ಮತದಾನದ ದಿನ ಜಿಲ್ಲೆಯಾದ್ಯಂತ 10 ಡಿವೈಎಸ್‌ಪಿಗಳು, 23 ಇನ್‌ಸ್ಪೆಕ್ಟರ್‌ಗಳು, 48 ಪಿಎಸ್‌ಐಗಳು, 111 ಎಎಸ್‌ಐಗಳು, 1,058 ಹಿರಿಯ ಕಾನ್‌ಸ್ಟೆಬಲ್‌ಗಳು, 1,000 ಗೃಹರಕ್ಷಕ ದಳದ ಸಿಬ್ಬಂದಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 12 ತಂಡಗಳು, ಕೇಂದ್ರ ಮೀಸಲು ಪಡೆಯ ಏಳು ತುಕಡಿಗಳಿಂದ 300 ಸಿಬ್ಬಂದಿ, ಒಟ್ಟು ಸುಮಾರು 3,300 ಪೊಲೀಸ್ ಹಾಗೂ ಇತರ ಭದ್ರತಾ ಸಿಬ್ಬಂದಿ ಭದ್ರತೆ ನೋಡಿಕೊಳ್ಳಲಿದ್ದಾರೆ.

ಬಳಸಬಹುದಾದ ಗುರುತಿನ ಚೀಟಿಗಳು

1) ಪಾಪ್‌ಪೋರ್ಟ್

2) ಚಾಲನಾ ಪರವಾನಗಿ

3) ಕೇಂದ್ರ/ ರಾಜ್ಯ ಸರ್ಕಾರದ, ಅರೆ ಸರ್ಕಾರಿ ಮತ್ತು ಸಾರ್ವಜನಿಕವಲಯದಸಂಸ್ಥೆಗಳುಸಿಬ್ಬಂದಿಗೆ ನೀಡಿರುವ ಫೋಟೋ ಗುರುತಿನ ಚೀಟಿ

4) ಬ್ಯಾಂಕ್/ ಅಂಚೆ ಕಚೇರಿಯ ಫೋಟೋವುಳ್ಳ ಪಾಸ್‌ಬುಕ್

5) ಪಾನ್‌ಕಾರ್ಡ್‌

6) ಎನ್‌ಪಿಆರ್ ಅಡಿ ಅರ್ಜಿ ನೀಡಿರುವ ಸ್ಮಾರ್ಟ್ ಕಾರ್ಡ್

7) ಉದ್ಯೋಗ ಖಾತರಿ ಕಾರ್ಡ್

8) ಕಾರ್ಮಿಕರ ಸಚಿವಾಲಯದ ಯೋಜನೆಯ ಅಡಿ ನೀಡಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್

9) ಫೋಟೋವುಳ್ಳ ಪಿಂಚಣಿ ದಾಖಲೆ

10) ಚುನಾವಣಾ ಆಯೋಗದ ದೃಢೀಕೃತ ಫೋಟೋ ವೋಟರ್ ಸ್ಲಿಪ್ಸ್

11) ಆಧಾರ್ ಕಾರ್ಡ್
***

ಚುನಾವಣೆಗೆ ಬಳಕೆಯಾದ ವಾಹನಗಳು

162ಕೆಎಸ್‌ಆರ್‌ಟಿಸಿ ಬಸ್‌ಗಳು

204 ಜೀಪ್‌ಗಳು

1 ದೋಣಿ
***

ಕ್ಷೇತ್ರದ ಮತಗಟ್ಟೆಗಳ ಸಂಖ್ಯೆ

ವಿಧಾನಸಭಾ ಕ್ಷೇತ್ರ;ಮತಗಟ್ಟೆಗಳು

ಭಟ್ಕಳ;248

ಕುಮಟಾ;215

ಕಾರವಾರ;262

ಹಳಿಯಾಳ;217

ಶಿರಸಿ;264

ಯಲ್ಲಾಪುರ;231

ಕಿತ್ತೂರು;230

ಖಾನಾಪುರ;255

ಒಟ್ಟು;1,922

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT