ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ವಿದ್ಯುತ್ ಬಿಲ್: ಪರಿಶೀಲನೆಗೆ ಮನವಿ

ಗೃಹ ಬಳಕೆಯ ವಿದ್ಯುತ್‌ಗೆ ಒಂದು ತಿಂಗಳಿಗೆ ಸುಮಾರು ₹ 10 ಸಾವಿರ ಶುಲ್ಕ!
Last Updated 16 ಅಕ್ಟೋಬರ್ 2019, 11:11 IST
ಅಕ್ಷರ ಗಾತ್ರ

ಕುಮಟಾ: ತಾಲ್ಲೂಕಿನ ಹೊಸಹೆರವಟ್ಟಾದ ನಾರಾಯಣ ದೇವು ಗೌಡ ಎನ್ನುವವರಿಗೆ ಸೆಪ್ಟೆಂಬರ್ ತಿಂಗಳ ಗೃಹ ಬಳಕೆಯ ವಿದ್ಯುತ್ ಶುಲ್ಕ₹9,964 ಬಂದಿದೆ. ಇದರಿಂದ ಕಂಗಾಲಾದ ಅವರು ವಿದ್ಯುತ್ ಬಿಲ್ ಪರಿಶೀಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

‘ನಮ್ಮ ಮನೆಯ ವಿದ್ಯುತ್ ಮೀಟರ್ 2015ರಿಂದ 2017ರವರೆಗೆ ಹಾಳಾಗಿದೆ ಎಂದು ಈ ಹಿಂದೆಯೇ ಎರಡು ಬಾರಿ ಮನವಿ ಕೊಟ್ಟಿದ್ದೆ. ಆದರೆ, ಆಗಿನ ವಿದ್ಯುತ್ ಬಿಲ್ ಮೊತ್ತವನ್ನು ಈಗ ಪಾವತಿಸಲು ಸೂಚಿಸಲಾಗಿದೆ. ಏಕಾಏಕಿ ಸಾವಿರಾರು ರೂಪಾಯಿ ಪಾವತಿಸಲು ಕಷ್ಟವಾಗುತ್ತದೆ’ ಎಂದು ಅವರು ವಿವರಿಸಿದ್ದಾರೆ.

ಈ ಬಗ್ಗೆಪ್ರತಿಕ್ರಿಯಿಸಿದಹೆಸ್ಕಾಂ ಸಹಾಯಕ ಲೆಕ್ಕಾಧಿಕಾರಿ ಲೋಹಿತ್ ನಾಯ್ಕ, ‘ನಾರಾಯಣ ದೇವು ಗೌಡ ಅವರ ಮನೆಯ ವಿದ್ಯುತ್ ಮೀಟರ್ ಹಾಳಾಗುವ ಮುಂಚೆ ಪ್ರತಿತಿಂಗಳು ಸುಮಾರು 140 ಯುನಿಟ್ ಬಳಕೆಯ ಬಿಲ್ ಬರುತ್ತಿತ್ತು. ಮೀಟರ್ ಹಾಳಾದಾಗ ಕೇವಲ ಏಳು ಯುನಿಟ್ ಬಳಕೆಯ ಬಿಲ್ ಬಂದಿತ್ತು. ಅಂದಿನಿಂದ ಹೊಸ ಮೀಟರ್ ಅಳವಡಿಸುವವರೆಗೆ ಎರಡು ವರ್ಷ ಅವರು ಏಳು ಯುನಿಟ್‌ನ ಬಿಲ್ ಪಾವತಿಸುತ್ತಿದ್ದರು. ಸಂಸ್ಥೆಯ 2016ನೇ ಸಾಲಿನ ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಈ ಅಂಶ ಬೆಳಕಿಗೆ ಬಂದಿತು’ ಎಂದರು.

‘ನಾರಾಯಣ ಗೌಡ ಅವರು ನಿಜವಾಗಿಯೂ ಬಳಸಿದ ವಿದ್ಯುತ್ ಹಾಗೂ ಎರಡು ವರ್ಷಗಳ ಕಾಲ ಏಳು ಯುನಿಟ್‌ನಂತೆ ಪಾವತಿಸಿದ ಶುಲ್ಕದ ವ್ಯತ್ಯಾಸದ ಮೊತ್ತ ಲೆಕ್ಕ ಹಾಕಿ ಲೆಕ್ಕ ಪರಿಶೋಧಕರು ವಸೂಲಾತಿಗೆ ಸೂಚಿಸಿದ್ದಾರೆ. ಅದರಂತೆ ಅವರಿಗೆ₹ 9,964 ಮೊತ್ತದ ಬಿಲ್ ಕಳಿಸಲಾಗಿದೆ. ತಮಗೆ ಅನ್ಯಾಯವಾಗಿದೆ ಎಂದು ನಾರಾಯಣ ಗೌಡರು ಭಾವಿಸಿದರೆ ಅವರು ಇಲಾಖೆಯ ಗ್ರಾಹಕರ ಕುಂದು ಕೊರತೆ ವಿಭಾಗಕ್ಕೆ ಅರ್ಜಿ ಸಲ್ಲಿಸಬಹುದು.ಕಂತಿನ ಮೂಲಕವೂ ಅವರುಪಾವತಿಸಲು ಅವಕಾಶವಿದೆ’ ಎಂದುತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT